

ಕುಷ್ಟಗಿ: ಜಾನುವಾರುಗಳು ರೈತರ ಆದಾಯದ ಮೂಲಗಳಾಗಿವೆ. ಅವುಗಳ ಆರೋಗ್ಯದ ಬಗ್ಗೆ ಕೃಷಿಕರು ಕಾಳಜಿವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ ಮದ್ದಾನಿ ಹಿರೇಮಠ ಹೇಳಿದರು.
ಇದನ್ನೂ ಓದಿ: ಜಾನುವಾರುಗಳಿಗೆ ಲಸಿಕೆ ಹಾಕಿಸಲು ಅರಿವು ಮೂಡಿಸಿ
ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ತಾಲೂಕಿನ ಕಂದಕೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಲುಬಾಯಿ ಹಾಗೂ ಚರ್ಮಗಂಟು ರೋಗದ 7ನೇ ಸುತ್ತಿನ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಶುವೈದ್ಯ ಸೇವಾ ಇಲಾಖೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಸಿದ್ದಲಿಂಗಯ್ಯ ಶಂಕೀನ್ ಮಾತನಾಡಿ, ತಾಲೂಕಿನಲ್ಲಿ ಆಕಳು ಹಾಗೂ ಎಮ್ಮೆ ಸೇರಿ 73,325 ಜಾನುವಾರುಗಳಿದ್ದು, ಕಾಲುಬಾಯಿ ಹಾಗೂ ಚರ್ಮಗಂಟು ರೋಗಗಳಿಗೆ ಸಂಬಂಧಿಸಿದಂತೆ ಏ.26ರಿಂದ 15ದಿನಗಳ ಕಾಲ ಲಸಿಕೆ ನೀಡಲಾಗುತ್ತಿದೆ. ರೈತರು ಲಸಿಕಾ ಅಭಿಯಾನದ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಪಿಎಸಿಎಸ್ ಅಧ್ಯಕ್ಷ ಶರಣಬಸವ ಕುಷ್ಟಗಿ, ಗ್ರಾಪಂ ಅಧ್ಯಕ್ಷೆ ದುರುಗಮ್ಮ ಹಾದಿಮನಿ, ಸದಸ್ಯರಾದ ಭೀಮನಗೌಡ ಪಾಟೀಲ್, ನಾಗಪ್ಪ ವಾಲ್ಮೀಕಿ, ಪಶುಪಾಲನಾ ಇಲಾಖೆ ಸಿಬ್ಬಂದಿ ಸಂಗಪ್ಪ, ಪ್ರವೀಣ, ಸೌಮ್ಯಾ ಪಟ್ಟಣಶೆಟ್ಟಿ, ವೀರೇಶ, ಕರೀಂಸಾಬ, ಉಮೇಶ ಅರಳಿಮಠ, ಶರಣಪ್ಪ ತೊಂಡಿಹಾಳ, ಪಶು ಸಖಿ ನಿರ್ಮಲಾ ಕಂದಕೂರು, ಪ್ರಮುಖರಾದ ಕಂದಕೂರಪ್ಪ ವಾಲ್ಮೀಕಿ, ಶರಣಪ್ಪ ಗೋಪಾಳಿ, ಶರಣಪ್ಪ ಬಿಜಕಲ್, ಯಮನಪ್ಪ ಗುಮಗೇರಿ, ಚಂದ್ರಹಾಸ ಬಾವಿಕಟ್ಟಿ ಇತರರಿದ್ದರು.