

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಬಸ್ ನಿಲ್ದಾಣದ ಎದುರಿನ ಲೈಫ್ಲೈನ್ ಆಸ್ಪತ್ರೆಯಲ್ಲಿ ಆ. 8ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಯಕೃತ್ತು (ಲೀವರ್) ಶಸ್ತ್ರಚಿಕಿತ್ಸಾ ಸಮಾಲೋಚನೆ ಏರ್ಪಡಿಸಲಾಗಿದೆ. ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯ ಯಕೃತ್ತು ಶಸ್ತ್ರಚಿಕಿತ್ಸಾ ತಜ್ಞ ಡಾ. ಮಹೇಶ ಗೋಪಶೆಟ್ಟಿ ಸಮಾಲೋಚನೆಗೆ ಲಭ್ಯರಿರುವರು. ಲೀವರ್ ಸಿರೋಸಿಸ್, ಲೀವರ್ ಕಸಿ, ಲೀವರ್ ಕ್ಯಾನ್ಸರ್, ತೀವ್ರತರವಾದ ಲೀವರ್ ವೈಫಲ್ಯ, ಇನ್ನಿತರ ಸಮಸ್ಯೆಗಳಿರುವವರು ಪಾಲ್ಗೊಳ್ಳಬಹುದು.