ಕಾನೂನು ವಿವಿಯಲ್ಲಿ ಲಿವರ್ ಡೇ ಆಚರಣೆ

Published on

ಹುಬ್ಬಳ್ಳಿ: ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆ, ಯೂಥ್ ರೆಡ್ ಕ್ರಾಸ್ ಘಟಕ, ಕಾನೂನು ಸೇವೆಗಳ ಘಟಕ ಹಾಗೂ ಡೆಲ್ವಿನ್ ಫಾರ್ಮೂಲೇಶನ್ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಯಕೃತ್ತು ದಿನ (ಲಿವರ್ ಡೇ) ಆಚರಿಸಲಾಯಿತು.

ನಾನ್ ಆಲ್ಕೋಹಾಲಿಕ್ ಸ್ಟಿಟೋಹಿಪ್ಯಾಟಿಟೀಸ್ ಅರಿವು' ವಿಷಯದ ಮೇಲೆ ತಜ್ಞರು ಬೆಳಕು ಚೆಲ್ಲಿದರು.

ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿ ಗ್ಯಾಸ್ಟ್ರೊಎಂಟೊರಾಲಾಜಿ ತಜ್ಞ ಡಾ. ಮಂಜುನಾಥ ಶೇಪೂರ್, ಲಿವರ್ ನ ಜೀರ್ಣಕಾರಿ ವ್ಯವಸ್ಥೆ ಮತ್ತು ಅದರ ಅಸ್ವಸ್ಥತೆ, ಅದಕ್ಕೆ ಕಾರಣಗಳು, ಪರಿಹರಿಸುವ ಬಗೆಗಳ ಕುರಿತು ಮಾಹಿತಿ ನೀಡಿದರು. ಹೊಟ್ಟೆಯ ಆರೋಗ್ಯಕ್ಕೆ ಆರೋಗ್ಯಪೂರ್ಣ ಜೀವನ ಶೈಲಿ ಪಾಲಿಸಲು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದರು. ಕುಲಸಚಿವೆ ಅನುರಾಧಾ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ್ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕರಾದ ಡಾ. ಭೀಮಾಬಾಯಿ ಎಸ್. ಮೂಲಗೆ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ಆದಿತ್ಯ ಹೊಸಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಮೋಹಿತ ಶೇಟ ಪ್ರಾರ್ಥನೆ ಹಾಡಿದರು. ಮೇನಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕ ಡಾ. ರಂಗಸ್ವಾಮಿ ಡಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net