ಲಿವರ್ ಕ್ಲಿನಿಕ್, ಎಂಡೋಸ್ಕೋಪಿ ವಿಭಾಗ ಉದ್ಘಾಟನೆ

20Jaggu7
ಬೆಳಗಾವಿಯ ಟಿಳಕವಾಡಿಯ ಸೆಂಟ್ರಾಕೇರ್ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಿವರ್ ಕ್ಲಿನಿಕ್ ಹಾಗೂ ಗ್ಯಾಸ್ಟ್ರೋಎಂಟರಾಲಜಿ ಮತ್ತು ಎಂಡೋಸ್ಕೋಪಿ ವಿಭಾಗವನ್ನು ರೋಹಿಣಿ ಗೋಗಟೆ ಉದ್ಘಾಟಿಸಿದರು. ಡಾ.ನೀತಾ ದೇಶಪಾಂಡೆ, ಡಾ.ಸುನೀಲ ಶೆಣವಿ, ಡಾ.ಶ್ರೀಶೈಲ ಹಂಗಂಡಿ, ಡಾ.ರೋಹಿತ ಜೋಶಿ ಇದ್ದರು.
Published on

ಬೆಳಗಾವಿ: ಟಿಳಕವಾಡಿಯ ಸೆಂಟ್ರಾಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಿವರ್ ಕ್ಲಿನಿಕ್ ಹಾಗೂ ಗ್ಯಾಸ್ಟ್ರೋಎಂಟರಾಲಜಿ ಮತ್ತು ಎಂಡೋಸ್ಕೋಪಿ ವಿಭಾಗವನ್ನು ಶುಕ್ರವಾರ ಡಾ.ಸುನೀಲ ಶೆಣವಿ, ಸಮಾಜ ಸೇವಕಿ ರೋಹಿಣಿ ಗೋಗಟೆ ಉದ್ಘಾಟಿಸಿದರು.

ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯಗಳು, ಸೂಪರ್ ಸ್ಪೆಷಾಲಿಟಿ ವಿಭಾಗಗಳ ಕುರಿತು ಮಾಹಿತಿ ನೀಡಿ ಮಾತನಾಡಿದ ಸೆಂಟ್ರಾಕೇರ್‌ನ ವೈದ್ಯಕೀಯ ನಿರ್ದೇಶಕಿ ಡಾ.ನೀತಾ ದೇಶಪಾಂಡೆ, ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸಕ ಡಾ.ಸುನೀಲ ಶೆಣವಿ ಘಟಕದ ನೇತೃತ್ವ ವಹಿಸಲಿದ್ದಾರೆ. ಗ್ಯಾಸ್ಟ್ರೋಎಂಟರಾಲಜಿ ಮತ್ತು ಎಂಡೋಸ್ಕೋಪಿ ವಿಭಾಗವನ್ನು ಡಾ.ಶ್ರೀಶೈಲ ಹಂಗಂಡಿ, ಡಾ.ಆನಂದ ತೋಟಗಿ ಮತ್ತು ಡಾ.ರೋಹಿತ್ ಜೋಶಿ ಅವರನ್ನೊಳಗೊಂಡ ತಜ್ಞರ ತಂಡ ನಿರ್ವಹಣೆ ಮಾಡಲಿದೆ. ಅನ್ನನಾಳ, ಮೆದೋಜ್ಜೀರಕ ಗ್ರಂಥಿ, ಯಕೃತ್ತು, ಪಿತ್ತಕೋಶ, ಜಠರ ಕ್ಯಾನ್ಸರ್ ಹಾಗೂ ಕಾಮಾಲೆ ಚಿಕಿತ್ಸೆ ಸೇರಿದಂತೆ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲಾಗುವುದು ಎಂದರು.

ಡಾ.ನರೇಂದ್ರ ಪಾಟೀಲ ಸ್ವಾಗತಿಸಿದರು. ಸೆಂಟ್ರಾಕೇರ್ ಮುಖ್ಯ ಪೌಷ್ಟಿಕತಜ್ಞೆ ಡಾ.ಮಮತಾ, ಡಾ.ಆನಂದ ಸಣಕಲ, ಅರಿವಳಿಕೆ ತಜ್ಞ ಡಾ.ಶ್ರೀವತ್ಸ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net