

ಬಸವನಬಾಗೇವಾಡಿ: ಹನ್ನೆರಡನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣನವರು ಮಹಿಳೆಯರಿಗೆ ನೀಡಿದ್ದ ಸ್ಥಾನಮಾನವನ್ನು ನಂತರ ಯಾರೂ ಇಲ್ಲಿಯವರೆಗೂ ನೀಡಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯೆ ಭಾರತಿ ಪಾಟೀಲ ಹೇಳಿದರು.
ಇಂಗಳೇಶ್ವರ ವಿರಕ್ತಮಠದ ಉತ್ಸವ ನಿಮಿತ್ತ ಜಿಲ್ಲಾ ಕಸಾಪ ವತಿಯಿಂದ ಆಯೋಜಿಸಿದ್ದ ಪ್ರಥಮ ಮಹಿಳಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು 21ನೇ ಶತಮಾನದಲ್ಲಿಯೂ ಕೂಡ ಮಹಿಳೆಯರಲ್ಲಿ ಇನ್ನೂ ಎರಡನೇ ದರ್ಜೆ ಪ್ರಜೆಯ ಭಾವನೆ ಜೀವಂತವಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಮಾನದಲ್ಲಿ ವಿದ್ಯಾವಂತ ಮಹಿಳೆಯರೇ ಕುಟುಂಬದ ವೃದ್ಧರನ್ನು ಕಡೆಗಣಿಸುತ್ತಿರುವುದು ಅತ್ಯಂತ ಆತಂಕದ ವಿಷಯ. ಮಹಿಳೆಯರು ಜಂಟಿ ಕುಟುಂಬದೊಂದಿಗೆ ಪ್ರೀತಿ, ಮಮತೆಯಿಂದ ಬದುಕಬೇಕು. ಕುಟುಂಬದಲ್ಲಿ ಸಾಮರಸ್ಯ ವಾತಾವರಣ ಸೃಷ್ಟಿಸಬೇಕು ಎಂದು ಸಲಹೆ ನೀಡಿದರು.
ಹೂವಿನ ಹಿಪ್ಪರಗಿ ಪತ್ರಿಮಠದ ದಾಾಯಿಣಿ ಮಾತಾಜಿ ಆಶೀರ್ವಚನ ನೀಡಿ, ಹೆಣ್ಣು ಮಗುವಿಗೆ ತಾಯಿಯ ಸಂಸ್ಕಾರ ಅತ್ಯಂತ ಪರಿಣಾಮ ಬೀರುತ್ತದೆ. ತಾಯಿ ಎಂದರೆ ದೇವರ ಸ್ವರೂಪ. ಕುಟುಂಬದ ನಿರ್ವಹಣೆಯ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದರು.
ಗೋಷ್ಟಿಯ ಅಧ್ಯತೆ ವಹಿಸಿದ ಸಾಹಿತಿ ಮಡಿವಾಳಮ್ಮ ನಾಡಗೌಡ ಮಾತನಾಡಿ, ಮಹಿಳೆ ಎಲ್ಲಾ ೇತ್ರಗಳಲ್ಲಿ ಗಣನೀಯ ಸಾಧನೆಗೈದಿದ್ದಾಳೆ. ಬಸವಾದಿ ಶರಣರು ಮಹಿಳೆಗೆ ಪೂಜ್ಯನಿಯ ಸ್ಥಾನ ನೀಡಿದರು. ತದನಂತರ ಡಾ. ಬಾಬಾಸಾಹೇಬ ಅಂಬೇಡ್ಕರ್ ಸಂವಿಧಾನದ ಮೂಲಕ ಮಹಿಳೆಗೆ ಸಮಾನತೆಯ ಹಕ್ಕುಗಳನ್ನು ನೀಡಿ ಸಮರ್ಥರನ್ನಾಗಿ ಮಾಡಿದರು ಎಂದರು.
ಮಹಿಳಾ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಸಾಹಿತಿ ಶಿಲ್ಪಾ ಭಸ್ಮೆ ಮಾತನಾಡಿ, ಇತ್ತೀಚಿಗೆ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಬಾನು ಮುಸ್ತಾಕ ಅವರ ಸಾಹಿತ್ಯ ದೇಶಕ್ಕೆ ಕನ್ನಡ ಸಾಹಿತ್ಯ ಪರಿಚಯಿಸಿದ ಕೀರ್ತಿ ಮಹಿಳಾ ಸಮಾಜಕ್ಕೆ ಸಲ್ಲುತ್ತದೆ. ಪಾಕಿಸ್ತಾನ ಯುದ್ಧದ ರೂವಾರಿ ಸೂಫಿಯಾ ಖುರೇಶಿ, ವಿಮಮ್ ಸಿಂಗ್ ಮಹಿಳೆಯರು ನೇತೃತ್ವದ ವಹಿಸಿದ್ದು ಅತ್ಯಂತ ಶ್ಲಾನೀಯ. ಮಹಿಳೆಯರ ಸ್ಥಾನ ಪಡೆಯುವ ಶಕ್ತಿ ಮಹಿಳೆಯರೇ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಸಾಪ ಅಧ್ಯ ಹಾಸಿಂಪೀರ ವಾಲಿಕಾರ ಉಪಸ್ಥಿತರಿದ್ದರು. ಮುಖ್ಯ ಅಧ್ಯಾಪಕಿ ಕಮಲಾ ಮುರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ರಶ್ಮೀ ಬದ್ನೂರ, ಚಿತ್ರ ಕಲಾ ಮಂಡಳಿ ಸದಸ್ಯೆ ರಾಜೇಶ್ವರಿ ಮೋಪಗಾರ, ಸಾಹಿತಿ ಶಾಂತಾ ಬಿರಾದಾರ ಮಾತನಾಡಿದರು. ಗಿರಿಜಾ ಸಜ್ಜನ ಪ್ರಾರ್ಥಿಸಿದರು. ಸಾಹಿತಿ ಮಮತಾ ಮುಳಸಾವಳಗಿ ನಿರೂಪಿಸಿದರು. ಶಾಂತಾ ಚೌರಿ ವಂದಿಸಿದರು.