ಶಿಸ್ತು-ಸಂಯಮದಿಂದ ಬದುಕು ಸಾಗಿಸಿ

11 HBH 01
ಹಗರಿಬೊಮ್ಮನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾದಿನ ಕಾರ್ಯಕ್ರಮ ಉದ್ಘಾಟಿಸಲಾಯಿತು. ತಹಸೀಲ್ದಾರ್ ಆರ್.ಕವಿತಾ, ವೈದ್ಯಾಧಿಕಾರಿ ಹಾಲಮ್ಮ, ರಂಗಭೂಮಿ ಕಲಾವಿದೆ ಡಾ.ಕೆ.ನಾಗರತ್ನಮ್ಮ, ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ ಮತ್ತಿತರರು ಇದ್ದರು.
Published on

ಹಗರಿಬೊಮ್ಮನಹಳ್ಳಿ: ಮನೆ ಯಜಮಾನಿ, ತಾಯಿ, ಹೆಂಡತಿಯಾಗಿ ಅನೇಕ ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿರುವ ಮಹಿಳೆಯರಿಗೆ ತಾಳ್ಮೆ ಎನ್ನುವುದು ದೇವರು ಕೊಟ್ಟ ವರವಾಗಿದೆ ಎಂದು ಡಾ.ಹಾಲಮ್ಮ ಹೇಳಿದರು.

ಪಟ್ಟಣದ ಚಿಂತ್ರಪಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ಮಹಿಳಾ ವಿಭಾಗದಿಂದ ಇತ್ತೀಚಿಗೆ ಏರ್ಪಡಿಸಿದ್ದ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಉದ್ಯೋಗಸ್ಥ ಮಹಿಳೆಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಪ್ರತಿಯೊಬ್ಬರೂ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ. ಒತ್ತಡ ಬದುಕು ಮಾನಸಿಕ ಅಸ್ವಸ್ಥರನ್ನಾಗಿಸುತ್ತದೆ. ಶಿಸ್ತು, ಸಂಯಮದಿಂದ ಬದುಕು ಸಾಗಿಸುವುದೇ ಇದಕ್ಕೆ ಪರಿಹಾರ ಎಂದರು.

ತಹಸೀಲ್ದಾರ್ ಆರ್.ಕವಿತಾ ಮಾತನಾಡಿ, ಪುರಷ ಮತ್ತು ಮಹಿಳೆ ಎಂಬ ಕೀಳಿರಿಮೆ ಬೇಡ. ಮಹಿಳೆಯರು ತಾಳ್ಮೆ ಇದ್ದರೆ ಕುಟುಂಬ, ಸಂಸಾರ ಹಸನಾಗಿರುತ್ತೆ ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.

ರಂಗಭೂಮಿ ಕಲಾವಿದೆ ಡಾ.ಕೆ.ನಾಗರತ್ನಮ್ಮ ಮಾತನಾಡಿ, ಅಂದು ಗ್ರಾಮೀಣ ಪ್ರದೇಶಗಳಲ್ಲಿ ನಾಟಕಗಳು ನಡೆಯುತ್ತಿದ್ದವು. ಮಹಿಳೆ ಪಾತ್ರದಾರಿಗಳಿಗೆ ಗೌರವ ನೀಡಲಾಗುತಿತ್ತು. ಅದರಲ್ಲೂ ಕೆಲ ಜನರು ಕೊಂಕುಮಾತನಾಡುತಿದ್ದರು. ಯಾವುದನ್ನು ಕಿವಿಗೆ ಹಾಕಿಕೊಳ್ಳದೆ ಪಾತ್ರಕ್ಕೆ ನ್ಯಾಯದೊರಕಸಿ ಕೊಡೋ ಕಾಣಿಕೆ ಪಡೆದು ಗೌರದಿಂದಲೇ ಮರಳುತಿದೇವು. ಕಾಲ ಬದಲಾಗಿದೆ, ಕಲಾರಾಧಕರ ದೃಷ್ಟಿಕೋನಗಳು ಬದಲಾಗಿವೆ. ಮಹಿಳೆಯರನ್ನು ಗೌರವದಿಂದ ಕಾಣುವ ದಿನಗಳು ಇಂದು ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶಿಕ್ಷಕಿಯರಾದ ದಾದಾಬಿ, ಶಾಂತಕುಮಾರಿ ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net