

ಹನುಮಸಾಗರ: ಸ್ವಯಂ ಪರಿವರ್ತನೆ ಮೂಲಕ ಮನುಷ್ಯ ತನ್ನಲ್ಲಿರುವ ದುರ್ಬುದ್ಧಿಗಳನ್ನು ಸಂಹಾರ ಮಾಡಿ ಜೀವನದಲ್ಲಿ ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರವಚನಕಾರ ಏಕನಾಥ ಮೆದಿಕೇರಿ ಹೇಳಿದರು.
ಇದನ್ನೂ ಓದಿ: ಸೋಮವಾರಪೇಟೆಯಲ್ಲಿ ನವರಾತ್ರಿ ಪೂಜೆಗೆ ತೆರೆ
ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ನವರಾತ್ರಿ ಉತ್ಸವದ ಪುರಾಣ ಮಹಾಮಂಗಳಾರತಿ, ಮುತ್ತೈದೆಯರ ಉಡಿ ತುಂಬುವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಮನುಷ್ಯ ತನಲ್ಲಿರುವ ಮದ, ಮತ್ಸರ, ಮೋಹ, ಕಾಮ, ಆಸೆಗಳನ್ನು ಬಿಟ್ಟು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ವಿಚಾರವಂತನಾಗಿ ಬಾಳಬೇಕು. ಪ್ರತಿಯೊಬ್ಬರಲ್ಲಿ ಇರುವ ದುಶ್ಚಟಗಳನ್ನು ತಾಯಿ ಬನಶಂಕರಿ ದೇವಿ ನಿರ್ಮೂಲನೆ ಮಾಡಲಿ ಎಂದರು.
ನವರಾತ್ರಿ ನಿಮಿತ್ತ ಮೆದಿಕೇರಿ ಆರ್ಟ್ ಗ್ಯಾಲರಿ ಕಲಾವಿದ ಏಕನಾಥ ಮೆದಿಕೇರಿ, ಬನಶಂಕರಿ ದೇವಿ ವಿವಿಧ ಅವತಾರಗಳ ಕಲಾಕೃತಿಗಳಿಗೆ ಬಣ್ಣ ಹಚ್ಚಿ ಹಬ್ಬಕ್ಕೆ ವಿಶೇಷ ಮೆರುಗು ನೀಡಿದರು.
ಪ್ರವಚನಕಾರ ವಸಂತ ಸಿನ್ನೂರ, ದೇವಾಂಗ ಸಮುದಾಯದ ಸ್ಥಳೀಯ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ಉಪಾಧ್ಯಕ್ಷ ಸುರೇಶ ಸಿನ್ನೂರ, ಪ್ರಮುಖರಾದ ಶಂಕ್ರಪ್ಪ ಸಪ್ಪಂಡಿ, ವೀರಪ್ಪ ಸಿನ್ನೂರ, ರಾಮನಗೌಡ ಕಡೆಮನಿ, ಹನುಮಂತಗೌಡ ಸಿನ್ನೂರ, ಅಶೋಕ ಸಿನ್ನೂರ, ಅರ್ಚಕರಾದ ರಾಘವೇಂದ್ರ ಸಿನ್ನೂರ, ಮಹೇಶ ಹುಲಮನಿ, ಬಸವರಾಜ ಸಿನ್ನೂರ, ಅನಿಲ ಸಿನ್ನೂರ, ಶಂಕರ ಹುಲಮನಿ, ವಿಶಾಲ ಸಿನ್ನೂರ, ರಾಘವೇಂದ್ರ ಹುಲಮನಿ, ರಾಜು ಹುಲಮನಿ, ನಾಗೇಶ ಚಾವುಂಡಿ ಇತರರಿದ್ದರು.