ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಬದುಕು

30Thyagarthi
ಹೊಸಂತೆಯಲ್ಲಿ ಹೊಲಿಗೆ ತರಬೇತಿ ಶಿಬಿರಕ್ಕೆ ಷಣ್ಮುಖ ಚಾಲನೆ ನೀಡಿದರು. ಧರ್ಮಪ್ಪ, ಗೌರಮ್ಮ, ಶ್ವೇತಾ ರಾಯ್ಕರ್ ಇದ್ದರು.
Published on

ತ್ಯಾಗರ್ತಿ: ಮಹಿಳೆಯರು ಕುಟುಂಬದ ಆರ್ಥಿಕ ಹೊರೆ ತಗ್ಗಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ವಯಂ ಉದ್ಯೋಗ ಮಾಡಬೇಕು ಎಂದು ಕರ್ಣಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಷಣ್ಮುಖ ಹೇಳಿದರು.

ಸಮೀಪದ ಹೊಸಂತೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೃಥ್ವಿ ಜ್ಞಾನ ವಿಕಾಸ ಕೇಂದ್ರದಿಂದ ಆಯೋಜಿಸಿದ್ದ ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳು ಗ್ರಾಮೀಣ ಜನರ ಬದುಕನ್ನು ಬದಲಾವಣೆ ಮಾಡಿದೆ. ಈ ಬದಲಾವಣೆಗೆ ಆರ್ಥಿಕ ಸಂಪನ್ಮೂಲ ಒದಗಿಸಲು ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತಿದೆ. ನಿಗದಿತ ಉದ್ದೇಶಗಳಿಗೆ ಸಾಲ ಪಡೆದ ಫಲಾನುಭವಿಗಳು ಅದೇ ಉದ್ದೇಶಕ್ಕಾಗಿ ಬಳಕೆ ಮಾಡಬೇಕು ಮತ್ತು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇದರಿಂದ ಇನ್ನೂ ಹೆಚ್ಚು ಸಹಾಯ ಪಡೆದು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.
ವಲಯ ಮೇಲ್ವಿಚಾರಕ ಧರ್ಮಪ್ಪ ಮಾತನಾಡಿ, ಹೊಲಿಗೆ ಕಲಿಕೆಯಿಂದ ಸ್ವಯಂ ಉದ್ಯೋಗ ಮಾಡಿ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದರು. 35 ಮಹಿಳೆಯರು ಹೊಲಿಗೆ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಸಮನ್ವಯ ಅಧಿಕಾರಿ ಗೌರಮ್ಮ, ತರಬೇತಿ ಶಿಕ್ಷಕಿ ಸಾವಿತ್ರಿ ಬೆಳಂದೂರು, ಸೇವಾ ಪ್ರತಿನಿಧಿ ಶ್ವೇತಾ ರಾಯ್ಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net