

ಬೀರೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಮೂಲಕ ಜನರಿಗೆ ಸ್ವಾವಲಂಬಿ ಬದುಕು ನೀಡುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ಸಂಜೀವ ಗೌಡ ಹೇಳಿದರು.
ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಜ್ಜಂಪುರ ತಾಲೂಕು ಬೀರೂರು ವಲಯದಲ್ಲಿ ನವ ಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮದ್ಯ ವರ್ಜನ ಶಿಬಿರದ ಮೂಲಕ ದುಶ್ಚಟ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡುವ ಕೆಲಸ ಮಾಡಿದ್ದಾರೆ. ಯೋಜನೆಯ ಮೂಲಕ ಶಕ್ತಿವಂತ, ಸಾಮರ್ಥ್ಯ ಸಮಾಜದ ನಿರ್ಮಾಣವಾಗಿದೆ. ಸಮಾಜದಲ್ಲಿ ಅದ್ಭುತ ಪರಿವರ್ತನೆ ತಂದು ಸಾಮಾಜಿಕ ಹೊಸ ಬದುಕಿನ ಕೊಡುಗೆ ನೀಡಿದೆ ಎಂದರು.
ಚಿತ್ರದುರ್ಗದ ಪ್ರಾದೇಶಿಕ ಕಚೇರಿಯ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ನಾಗರಾಜ್ ಮಾತನಾಡಿ, ವ್ಯಕ್ತಿ ಸಮಾಜದ ಶಕ್ತಿ. ನಮ್ಮಲ್ಲಿ ಕೀಳರಿಮೆ ಬೇಡ, ಮಾನವ ಸಂಪತ್ತು ದೇಶದ ಸಂಪತ್ತು.ಅದರ ಸದ್ಬಳಕೆಯಾಗಬೇಕು. ಜನಜಾಗೃತಿ ವೇದಿಕೆಯು ಧರ್ಮ, ಪಕ್ಷ, ಜಾತ್ಯಾತೀತವಾಗಿ ಸಮಾಜದಲ್ಲಿ ಕಾರ್ಯ ನಿವರ್ರ್ನಿರ್ವಹಿಸುತ್ತಿದೆ ಎಂದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಸಂತ್, ಕವಿತಾ, ರೂಪ, ವಲಯ ಮೇಲ್ವಿಚಾರಕ ಚಂದನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಮಿತ್ರ, ವಲಯ ಸೇವಾ ಪ್ರತಿನಿಧಿಗಳು ಹಾಗೂ ನವ ಜೀವನ ಸದಸ್ಯರು ಮತ್ತು ಸ್ವಸಹಾಯ ಸಂಘದ ಸದಸ್ಯರು ಇದ್ದರು.