ಬದುಕಿಗೆ ಸನಿಹ ರಾಮಾಯಣ

26 gvt 07
ಗಂಗಾವತಿ ಶ್ರೀ ಕೊಟ್ಟೂರು ಬಸವೇಶ್ವರ ವೇದಿಕೆಯಲ್ಲಿ ಕಿಷ್ಕಿಂಧಾ ಪ್ರತಿಷ್ಟಾನದಿಂದ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಶ್ರೀ ರಾಮಾಯಣ ಕಿಷ್ಕಿಂಧಾ ಕಾಂಡ ಪ್ರವಚದ ಕಾರ್ಯಕ್ರಮವನ್ನು ಕಜ್ಜಿಡೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ ಕಷ್ಣಾನಂದಶ್ರೀ ಉದ್ಘಾಟಿಸಿದರು. ಪ್ರವಚನಕಾರ ಜಗದೀಶ ಶರ್ಮಾ ಸಂಪ, ಮಾಜಿ ಶಾಸಕ ಪರಣ್ಣಮುನವಳ್ಳಿ, ಉದ್ಯಮಿಗಳಾದ ದರೋಜಿ ಶ್ರೀರಂಗಶ್ರೇಷ್ಟಿ, ಕೆಲೋಜಿ ಶ್ರೀನಿವಾಸ ಶ್ರೇಷ್ಟಿ ಇತರರಿದ್ದರು.
Published on

ಗಂಗಾವತಿ: ಜಗತ್ತಿಗೆ ಮಾದರಿಯಾದ ರಾಮಾಯಣ ಶುರುವಾಗುವುದೇ ಕಿಷ್ಕಿಂಧಾ ಕ್ಷೇತ್ರದ ಕಾವ್ಯದಿಂದ ಎಂದು ಕಜ್ಜಿಡೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ ಕೃಷ್ಣಾನಂದಶ್ರೀ ಹೇಳಿದರು.

ನಗರದ ಶ್ರೀ ಕೊಟ್ಟೂರು ಬಸವೇಶ್ವರ ವೇದಿಕೆಯಲ್ಲಿ ಕಿಷ್ಕಿಂಧಾ ಪ್ರತಿಷ್ಟಾನದಿಂದ ಶನಿವಾರ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಶ್ರೀ ರಾಮಾಯಣ ಕಿಷ್ಕಿಂಧಾ ಕಾಂಡ ಪ್ರವಚನ ಉದ್ಘಾಟಿಸಿ ಮಾತನಾಡಿದರು.

ರಾಮಾಯಣದಲ್ಲಿ ಬರುವ ಎಲ್ಲ ಸನ್ನಿವೇಶಗಳು ಮನುಷ್ಯನ ಬದುಕಿಗೆ ಹತ್ತಿರವಾಗಿದೆ. ರಾಮಾಯಣದತಂಹ ಗ್ರಂಥ ರಚನೆಯಾಗಿಲ್ಲ. ಕಿಷ್ಕಿಂಧಾ ಕಾಂಡದಲ್ಲಿ ಬರುವ ಎಲ್ಲ ಸನ್ನಿವೇಶಗಳು ಈ ಭಾಗದಲ್ಲಿ ಕಂಡು ಬಂದಿರುವುದು ಈ ಭಾಗದ ಜನರ ಸೌಭಾಗ್ಯ ಎಂದರು.

ಪ್ರವಚನಕಾರ ಜಗದೀಶ ಶರ್ಮಾ ಸಂಪ ಮಾತನಾಡಿ, ಮನುಷ್ಯರಲ್ಲಿ ಪರಂಪರೆ ಮತ್ತು ಸಂಸ್ಕೃತಿ ಮೌಲ್ಯಗಳನ್ನು ಬಿತ್ತುವ ಅಗತ್ಯವಿದ್ದು, ರಾಮಾಯಣದಂತ ಶ್ರೇಷ್ಠ ಕಾವ್ಯ ಜಗತ್ತಿನ ಯಾವ ದೇಶದಲ್ಲೂ ದೊರೆಯಲ್ಲ. ಕಿಷ್ಕಿಂಧಾ ಕ್ಷೇತ್ರದಲ್ಲಿ ಜರುಗುವ ಕಿಷ್ಕಿಂಧಾ ಕಾಂಡ ಎಲ್ಲ ವಿಧದಿಂದಲೂ ಅರ್ಥಪೂರ್ಣವಾಗಿದೆ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಉದ್ಯಮಿಗಳಾದ ದರೋಜಿ ಶ್ರೀರಂಗಶ್ರೇಷ್ಟಿ, ಕೆಲೋಜಿ ಶ್ರೀನಿವಾಸ ಶ್ರೇಷ್ಟಿ, ಸುಬ್ರಮಣ್ಯ ರಾಯ್ಕರ್, ಕೆ.ಚನ್ನಬಸಯ್ಯಸ್ವಾಮಿ, ವೈದ್ಯ ಶಿವಾನಂದ ಬಾವಿಕಟ್ಟಿ, ಸಂಚಾಲಕ ಪವನಕುಮಾರ ಗುಂಡೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net