

ಮಂಡ್ಯ: ವಿವಿಧ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ 338 ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನ.29ರಂದು ನಗರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಬೆಲ್‌ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ 10 ಸೇಲ್ಸ್ ಆಫೀಸರ್ಸ್ ಹಾಗೂ ಬ್ಯಾಂಕ್ ಮ್ಯಾನೇಜರ್ ಹುದ್ದೆ ಖಾಲಿ ಇದೆ. 18 ರಿಂದ 32 ವರ್ಷದೊಳಗಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಯಾವುದೇ ಪದವಿ ಹೊಂದಿರುವವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದವರಿಗೆ ಮಾಸಿಕ 16,800 ರೂ ವೇತನದ ಜತೆಗೆ ಇಎಸ್‌ಐ, ಪಿಎಫ್ ಹಾಗೂ ವಿಮೆ ಸೌಲಭ್ಯವಿರಲಿದೆ. ಬಂಧನ್ ಬ್ಯಾಂಕ್‌ನಲ್ಲಿ ಖಾಲಿ ಇರುವ 273 ಆರ್‌ಒ ಹಾಗೂ ಆರ್‌ಇ ಹುದ್ದೆಗೆ ಪಿಯುಸಿ ಮತ್ತು ಯಾವುದೇ ಪದವಿ ಹೊಂದಿರುವ 21 ರಿಂದ 32 ವರ್ಷದೊಳಗಿನವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಮಾಸಿಕ 16 ಸಾವಿರ ರೂ ವೇತನದ ಜತೆಗೆ ವಸತಿ, ಪೆಟ್ರೋಲ್ ಭತ್ಯೆ, ಇಎಸ್‌ಐ, ಪಿಎಫ್ ಸೌಲಭ್ಯ ಸಿಗಲಿದೆ. ಎಲ್‌ಐಸಿ ಸಂಸ್ಥೆಯಲ್ಲಿ 50 ಇನ್ಶೂರೆನ್ಸ್ ಅಡ್ವೈಸರ್ಸ್ ಹುದ್ದೆಗೆ 18 ವರ್ಷ ಮೇಲ್ಪಟ್ಟ ಪಿಯುಸಿ ಮತ್ತು ಯಾವುದೇ ಪದವಿ ಹೊಂದಿರುವ ಹಾಗೂ ಇನ್‌ಸೆಂಟಿವ್ಸ್ ಆಧಾರದಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಇನ್ನು ಕಂಪ್ಯೂಟರ್ ಹಾಗೂ ಬ್ಯೂಟಿಪಾರ್ಲರ್ ಸ್ವಯಂ ಉದ್ಯೋಗ ಮಾಡುವವರಿಗೆ ಆರ್‌ಸೆಟಿ(ಬ್ಯಾಂಕ್ ಆಫ್ ಬರೋಡಾ)ಯಲ್ಲಿ ತರಬೇತಿ ನೀಡಲು 70 ಜನರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. 18 ವರ್ಷ ಮೇಲ್ಪಟ್ಟ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಯಾವುದೇ ಪದವಿ ಹೊಂದಿರುವವರು ತರಬೇತಿ ಪಡೆದುಕೊಳ್ಳಬಹುದು. ಆಯ್ಕೆಯಾದವರಿಗೆ ವಸತಿ, ಊಟ, ತರಬೇತಿಗೆ ಸಂಬಂಧಿಸಿದ ಸಂಪೂರ್ಣ ವಸ್ತುಗಳನ್ನು ನೀಡಲಾಗುವುದು.
ಆಸಕ್ತರು ಅಂದು ಬೆಳಗ್ಗೆ 10.30ಕ್ಕೆ ವಿದ್ಯಾನಗರದ ಬೆಲ್‌ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ ಆಯೋಜಿಸಿರುವ ಸಂದರ್ಶನದಲ್ಲಿ ಭಾಗವಹಿಸಬಹುದು. ಮಾಹಿತಿಗಾಗಿ ದೂ.ಸಂ 08232-295124 ಮತ್ತು ಮೊ.ಸಂ 9164642684, 8660061488, 8970646629 ಯನ್ನು ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.