ಶರಣರ ಮಾರ್ಗದಲ್ಲಿ ಬದುಕು ಸಾಗಿಸಿ

Virakta Math of Yaranala, Sanganabasava Swami, Guru Vandane, Granth Release, Flower Hipparagi,
ಹೂವಿನಹಿಪ್ಪರಗಿ ಸಮೀಪದ ಬೂದಿಹಾಳ ಗ್ರಾಮದ ಸಿದ್ಧಪುರುಷ ಶತಾಯುಷಿ ಅಡಿವೆಪ್ಪ ಮಹಾರಾಜರ ಜೀವನ ಚರಿತ್ರೆ ಕುರಿತ ಗ್ರಂಥವನ್ನು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಬಿಡುಗಡೆ ಮಾಡಿದರು. ಸಂಗನಬಸವ ಸ್ವಾಮಿಗಳು, ರೇವಣಸಿದ್ಧೇಶ್ವರ ಶಾಂತಮಯ ಶ್ರೀಗಳು ಇತರರಿದ್ದರು.
Published on

ಹೂವಿನಹಿಪ್ಪರಗಿ: ಮಾನವನ ಜನ್ಮ ಸಿಗುವುದು ಕಷ್ಟ. ಈ ಭೂಮಿಗೆ ಬಂದ ಮೇಲೆ ಪರೋಪಕಾರಿ ಜೀವನ ನಡೆಸಿ ಬಡವರ ಕೈಹಿಡಿದು ಮೇಲೆತ್ತುವ ಕಾರ್ಯ ಮಾಡಬೇಕು. ಶರಣರ ದಾರಿಯಲ್ಲಿ ಬದುಕು ನಡೆಸಿದರೆ ಜೀವನ ಮುಕ್ತಿ ಹೊಂದಲಿದೆ ಎಂದು ಯರನಾಳ ವಿರಕ್ತಮಠ ಸಂಗನಬಸವ ಸ್ವಾಮಿಗಳು ಹೇಳಿದರು.

ಬಸವನಬಾಗೇವಾಡಿ ತಾಲೂಕಿನ ಸುಕ್ಷೇತ್ರ ಬೂದಿಹಾಳ ಗ್ರಾಮದ ಕರೆಸಿದ್ಧೇಶ್ವರ ಮಠದ ಮುಖಮಂಟಪ ಲೋಕಾರ್ಪಣೆ, ಶತಾಯುಷಿ ಸಿದ್ಧಪುರುಷ ಅಡಿವೆಪ್ಪ ಮಹಾರಾಜರ ಜೀವನ ಚರಿತ್ರೆಯ ಕುರಿತು ಗ್ರಂಥ ಬಿಡುಗಡೆ, ಗುರುವಂದನೆ ಹಾಗೂ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಾಲುಮತ ಮೂಲ ಗುರುಪೀಠದ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮಿಗಳು ಮಾತನಾಡಿ, ದೇಹಕ್ಕೆ ಆಯುಷ್ಯವಿದೆ. ಆದರೆ ಮನಸ್ಸಿಗೆ ಆಯುಷ್ಯ ಇಲ್ಲ. ಶ್ರೀಮಠದ ಗುರು ಅಡಿವೆಪ್ಪ ಮಹಾರಾಜರು ನಡೆದ ಬಂದ ದಾರಿಯಲ್ಲಿ ನಾವೆಲ್ಲರೂ ಬದುಕು ನಡೆಸಬೇಕು. ಇಂದಿನ ಯುವ ಪೀಳಿಗೆ ದುಶ್ಚಟಕ್ಕೆ ಬಿದ್ದು ಹಾಳಾಗಿ ಹೋಗುತ್ತಿದ್ದಾರೆ. ಸಾಧು-ಸಂತರ ಮಾರ್ಗದಲ್ಲಿ ನಡೆಯುವ ನಡೆಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ಬೂದಿಹಾಳ ಕರೆಸಿದ್ಧೇಶ್ವರ ಮಠದಲ್ಲಿ ಜಾತ್ಯತೀತವಾಗಿ ಎಲ್ಲರೂ ಮುಕ್ತ ಮನಸ್ಸಿನಿಂದ ಬಂದು ಗುರುವಿನ ಆರ್ಶೀವಾದ ಪಡೆದುಕೊಳ್ಳಬಹುದು. ಆ ನಿಟ್ಟಿನಲ್ಲಿ ಸಿದ್ಧಪುರುಷ ಅಡಿವೆಪ್ಪ ಮಹಾರಾಜರು ನೂರಾರು ವರ್ಷ ಬದುಕಿ ಸದಾ ಭಕ್ತರ ಚಿಂತನೆಯಲ್ಲಿದ್ದಾರೆ ಎಂದರು.

ಗೊಳಸಾರದ ಅಭಿವನ ಪುಂಡಲಿಂಗ ಮಹಾಶಿವಯೋಗಿಗಳು, ಮಾದುಲಿಂಗ ಮಾಹಾರಾಜರು, ಅರಳಿಚಂಡಿಯ ಅವಪ್ಪ ಮುತ್ಯಾ, ಹುಲಜಂತಿಯ ಮಾಲಿಂಗರಾಯ ಮಹಾರಾಜರು, ಸಿದ್ಧಪುರುಷ ಅಡಿವೆಪ್ಪ ಮಹಾರಾಜರು ಆರ್ಶೀವಚನ ನೀಡಿದರು.

ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕಾಂಗ್ರೆಸ್ ಮುಖಂಡ ಅಶೋಕಗೌಡ ಪಾಟೀಲ ಕುದರಿಸಾಲವಾಡಗಿ, ಡಾ. ಶಿವಾನಂದ ನಾಯಕ, ಸುಭಾಷ ಹಚ್ಯಾಳ, ಜಕ್ಕಣ್ಣ ಮೀಶಿ, ರಾಮಣ್ಣ ಪೂಜಾರಿ, ವಿಕಾಶ ಜೋಗಿ, ಮಂಜುನಾಥ ಬೋರಗಿ, ಸುಭಾಸ ಬೂದಗೂಳೆ, ಶಿವಾನಂದ ಬಿರಾದಾರ, ಗುರುನಾಥ ಮಾಸ್ತರ ಪಡಗಾನೂರ ಇತರರಿದ್ದರು. ರಾಮನಗೌಡ ಬಿರಾದಾರ ನಿರೂಪಿಸಿದರು. ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net