ನರಗುಂದದಲ್ಲಿ ಬದುಕೀತು ಬಡಜೀವ!

BUFFELO
Published on

ನರಗುಂದ: ಆಹಾರ ಹುಡುಕುತ್ತ ಆಕಸ್ಮಿಕವಾಗಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಜೀವ ಭಯದಲ್ಲಿ ನರಳಾಡುತ್ತಿದ್ದ ಎಮ್ಮೆಯೊಂದನ್ನು ಅಗ್ನಿಶಾಮಕ ದಳ ಅಧಿಕಾರಿ, ಸಿಬ್ಬಂದಿ ರಕ್ಷಿಸಿದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.

ಪಟ್ಟಣದ ಅಳಗವಾಡಿ ರಸ್ತೆ ಹೊರವಲಯದಲ್ಲಿರುವ ಜಿಟಿಟಿಸಿ ಕಾಲೇಜ್ ಬಳಿಯ ತೆರೆದ ಮ್ಯಾನ್‌ಹೋಲ್‌ಗೆ ಹುಣಸೀಕಟ್ಟಿ ಗ್ರಾಮದ ಶಿವಪ್ಪ ಹಡಪದ ಎಂಬುವರ ಎಮ್ಮೆ ಬಿದ್ದು ನರಳಾಡುತ್ತಿತ್ತು.

ಇದನ್ನು ಗಮನಿಸಿದ ವಿದ್ಯಾರ್ಥಿಗಳು ತಕ್ಷಣವೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರು.

ಕಾಲೇಜ್ ವಿದ್ಯಾರ್ಥಿಗಳ ಸಹಾಯದಿಂದ ಸತತ ಎರಡು ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಎಮ್ಮೆಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿದರು.

ಮ್ಯಾನ್‌ಹೋಲ್ ಅತ್ಯಂತ ಚಿಕ್ಕದಾಗಿದ್ದರಿಂದ ಎಮ್ಮೆಯನ್ನು ಹೊರತೆಗೆಯಲು ಕೆಲಕಾಲ ಹರಸಾಹಸ ಪಡಬೇಕಾಯಿತು. ಎಮ್ಮೆಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಪಶು ವೈದ್ಯರು ಚಿಕಿತ್ಸೆ ನೀಡಿದರು.

ಕಾರ್ಯಾಚರಣೆಯಲ್ಲಿ ಶಿವಾನಂದ ಉಳ್ಳಾಗಡ್ಡಿ, ಟಿ.ವೈ. ಕರಾಡೆ, ಬಿ.ಎಲ್. ಕುಂಚನೂರ, ಎಚ್.ಎಲ್. ಸಂತೋಷ, ಎಂ.ಬಿ.ಬಾವಾಖಾನವರ, ಬಿ.ಎಸ್. ಕರಡಿಗುಡ್ಡ, ಎಂ.ಟಿ. ಗೊನಬಾಳ, ಎಸ್.ಎಸ್. ಬೇಪಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net