

ನಂದೇಶ್ವರ: ವೃದ್ಧಾಶ್ರಮ ಕಡಿಮೆಯಾಗಿಸಲು ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಇಳಕಲ್ಲ-ಸವದಿ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.
ಸಮೀಪದ ಸವದಿ ಗ್ರಾಮದ ಸಾರವಾಡ ತೋಟದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಠಿ ಹಾಗೂ ಲಿಂ.ಸಂಗಪ್ಪ ಭೀಮಪ್ಪ ಸಾರವಾಡ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರವಾಡ ಮನೆತನದವರು ಕಾಯಕ ದಾಸೋಹದ ಮೂಲಕ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರೂ ಮಾದರಿಯಾಗುವಂತೆ ಬದುಕಬೇಕು ಎಂದರು.
ಸಿದ್ದಲಿಂಗ ಸಾಧು ಮಹಾರಾಜರು, ಭೈರವನಾಥ ಸ್ವಾಮೀಜಿ, ಹುಲಕುಂದದ ಮುರುಗಯ್ಯ ಸ್ವಾಮೀಜಿ, ಗುರುಪಾದ ಶರಣರು, ಮಹಾಂತಯ್ಯ ಹಿರೇಮಠ, ಮಹಾಂತೇಶ ಸಾರವಾಡ, ಶಂಕರ ಗೂಗವಾಡ, ನಿವೃತ ಶಿಕ್ಷಕ ಸದಾಶಿವ ಸವದಿ, ನಿವೃತ್ತ ಉಪನ್ಯಾಸಕ ಬಿ.ಜಿ.ಸಾರವಾಡ, ಭೀಮಣ್ಣ ಅಥಣಿ, ಬಸವರಾಜ ಸಾರವಾಡ, ಸಿದ್ದಲಿಂಗ ಅವಟಿ, ನಿಂಗಪ್ಪ ಸಾರವಾಡ ಇತರರಿದ್ದರು. ಮಹೇಶ ಮಠದ ನಿರೂಪಿಸಿದರು. ಪ್ರಕಾಶ ಸಾರವಾಡ ವಂದಿಸಿದರು.