

ಸೋಮವಾರಪೇಟೆ : ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ತೋಳೂರುಶೆಟ್ಟಳ್ಳಿ ಆಯುಷ್ಮಾನ್ ಅರೋಗ್ಯ ಮಂದಿರ ವತಿಯಿಂದ ತೋಳೂರುಶೆಟ್ಟಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಡೆಂೆಮುಕ್ತ ಶಾಲಾ ಆವರಣ ಮತ್ತು ಪ್ರಥಮ ಚಿಕಿತ್ಸೆ ಬಗೆಗಿನ ಜಾಗೃತಿ ಕಾರ್ಯಾಗಾರ ಬುಧವಾರ ನಡೆಯಿತು.
ವೈದ್ಯಕೀಯ ಪ್ರಥಮ ಚಿಕಿತ್ಸೆ ಹಾಗೂ ಹೃದಯ, ಶ್ವಾಸಕೋಶದ ಪುನರುಜ್ಜೀವದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮತ್ತು ತಂಡದವರು ಬಾಲಕಿಯರಿಗೆ ಮಾಹಿತಿ ನೀಡಿದರು. ಶಾಲಾ ಆವರಣ ಸ್ವಚ್ಛವಾಗಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ. ವಿದ್ಯಾರ್ಥಿನಿಯರು ಒತ್ತಡ ಮುಕ್ತ ಜೀವನವನ್ನು ರೂಢಿಸಿಕೊಳ್ಳಬೇಕು. ಜಂಕ್‌ಫುಡ್ ಸೇವಿಸುವುದನ್ನು ನಿಲ್ಲಿಸಬೇಕು. ಪೌಷ್ಟಿಕಾಂಶವಿರುವ ಮಿತ ಆಹಾರವನ್ನು ಸೇವಿಸಿದರೆ ತರಗತಿಯಲ್ಲಿ ಲವಲವಿಕೆಯಿಂದ ಇರಬಹುದು ಎಂದು ಶಾಂತಿ ತಿಳಿಸಿದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಕಾಶ್ ಮತ್ತು ನವೀನ್ ಪ್ರಾತ್ಯಕ್ಷಿಕೆ ಮೂಲಕ ಸಾಂಕ್ರಮಿಕ ರೋಗ ಹರಡುವ ಸೊಳ್ಳೆಗಳು ಮತ್ತು ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ 245 ವಿದ್ಯಾರ್ಥಿಗಳು ಭಾಗವಹಿಸಿದ್ದರು.
------------