

ಕುಂದಾಪುರ: ಆಧುನಿಕ ಜಗತ್ತಿನ ಭರಾಟೆಯಲ್ಲಿ ನಾವು ಮಾನಸಿಕ ಹಾಗೂ ದೈಹಿಕ ಒತ್ತಡಗಳಿಂದ ಆರೋಗ್ಯ ನಿರ್ಲಕ್ಷಿಸುತ್ತಿದ್ದೇವೆ. ಆರೋಗ್ಯ ಸ್ವಸ್ಥವಿದ್ದಾಗ ಮನುಷ್ಯ ನೆಮ್ಮದಿ ಬದುಕು ಸಾಗಿಸಲು ಸಾಧ್ಯ ಎಂದು ಗೋಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಹೇಳಿದರು.
ಕುಂದಾಪುರ ತಾಲೂಕಿನ ಮೂಡುಗೋಪಾಡಿ ರಿಫಾಯಿ ಜುಮಾ ಮಸೀದಿ ಆವರಣದಲ್ಲಿ ನಮ್ಮ ನಾಡು ಒಕ್ಕೂಟ ಕಮ್ಯುನಿಟಿ ಸೆಂಟರ್ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಕ್ತ ಪರೀಕ್ಷೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ನಾಡು ಒಕ್ಕೂಟ ಕಮ್ಯುನಿಟಿ ಸೆಂಟರ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮೌಝಮಿರ್ ಅಹ್ಮದ್ ರಷಾದಿ ಶಿಬಿರ ಉದ್ಘಾಟಿಸಿದರು. ಹುಸೇನ್ ಹೈಕಾಡಿ ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು. ಪ್ರಮುಖರಾದ ಶಾಂತಾ, ಸಾವಿತ್ರಿ, ಮೊಹಿದಿನ್, ಅಬ್ದುಲ್ ಖಾದರ್, ನಾಸಿರ್, ಅಲ್ತಾಫ್, ಹ್ಯಾರಿಸ್, ಹುಸೇನ್, ಸೋಮನಾಥ್ ಉಪಸ್ಥಿತರಿದ್ದರು.