ಶಿಕ್ಷಣದಿಂದ ಮೌಲ್ಯಯುತ ಬದುಕು

08BTP01
ಬೆಟ್ಟದಪುರದ ಅನಿಕೇತನ ಪಿಯು ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಫಿಲಾಸಫರ್ ಕಾಲ್ಡನ್ ಗ್ಯಾಸ್ಟೋ ಲಾರಾಂಪ, ಜಿ.ಟಿ ನಾಗರಾಜು, ಕೊಣಸೂರು ಮೂರ್ತಿ, ಪಾಲಕ ಗೋವಿಂದೇಗೌಡ, ಮಹೇಶ್, ಡಾ.ಜೆ.ಸೋಮಣ್ಣ, ಟಿ.ಆರ್.ಶಕುಂತಲಾ, ಟಿ.ಆರ್.ಸತೀಶ್‌ಕುಮಾರ್, ಪ್ರಭಾಕರ್, ಲೋಕೇಶ್, ಅಭಿಜಿತ್, ಶಿವನಂಜು ಇದ್ದರು.
Published on

ಬೆಟ್ಟದಪುರ: ಸಂತಸದ ಜೀವನಕ್ಕೆ ಬುದ್ಧನ ಬದುಕು ಆದರ್ಶವಾಗಿದೆ ಎಂದು ಬೈಲಕುಪ್ಪೆ ಸೆರಾಜೇ ಮೊನಸ್ಟಿಕ್ ವಿಶ್ವವಿದ್ಯಾಲಯದ ಬೌದ್ಧ ಗುರು ಫಿಲಾಸಫರ್ ಕಾಲ್ಡನ್ ಗ್ಯಾಸ್ಟೋ ಲಾರಾಂಪ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಅನಿಕೇತನ ಪಿಯು ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಮೂಲಕ ಮೌಲ್ಯಯುತ ಬದುಕು ರೂಪಿಸಿಕೊಳ್ಳಬೇಕು. ಪಾಲಕರು ಮತ್ತು ಶಿಕ್ಷಕರಿಲ್ಲದೆ ಏನನ್ನೂ ಕಲಿಯಲಾಗುವುದಿಲ್ಲ. ವಿದ್ಯಾರ್ಥಿಗಳು ಇವರ ಮಾರ್ಗದರ್ಶನ ಕಡೆಗಣಿಸದೆ, ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಟಿಬೆಟಿಯನ್ ಪ್ರಜೆಗಳಾದ ನಾವು ನಮ್ಮ ನೆಲ, ಬದುಕು ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾದೆವು. ಭಾರತ ನಮಗೊಂದು ಆಶ್ರಯ ಕೊಟ್ಟಿತು. ಈಗ ಭಾರತದ ನೆಲದಲ್ಲಿ ಜೀವಿಸುತ್ತಿದೇವೆ. ಆದರೂ ಈ ಭೂಮಿ ನಮ್ಮದಲ್ಲ. ವಾಸ್ತವ ಸ್ಥಿತಿ ಹೀಗಿದ್ದರೂ ನಾವು ಸಂತೋಷವಾಗಿ ಬದುಕುತ್ತಿದ್ದೇವೆ. ಇದಕ್ಕೆ ಕಾರಣ ಬುದ್ಧನ ಪ್ರೇರಣೆ ಎಂದು ನುಡಿದರು.

ನಿವೃತ್ತ ಪ್ರಾಂಶುಪಾಲ ಜಿ.ಟಿ ನಾಗರಾಜು ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ನಿರುತ್ಸಾಹಿಯಾಗಬೇಡಿ. ಮುಖದಲ್ಲಿ ಕಳೆ ತುಂಬಿಕೊಂಡು ಸಂತಸದಿಂದ ಇರುವುದನ್ನು ಕಲಿಯಿರಿ. ಶ್ರಮ ಇರುವ ಕಡೆ ಫಲ ಇದ್ದೇ ಇದೆ. ಶಿಕ್ಷಣದ ಮೂಲಕ ಸಂಸ್ಕಾರ ಪಡೆದುಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಕಿವಿಮಾತು ಹೇಳಿದರು.

ಸಾಮಾಜಿಕ ಹೋರಾಟಗಾರ ಕೊಣಸೂರು ಮೂರ್ತಿ, ಪಾಲಕ ಗೋವಿಂದೇಗೌಡ , ಎಸ್‌ಸಿವಿಡಿಎಸ್ ಮುಖ್ಯಶಿಕ್ಷಕ ಮಹೇಶ್, ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಜೆ ಸೋಮಣ್ಣ, ಟ್ರಸ್ಟಿ ಟಿ.ಆರ್.ಶಕುಂತಲಾ, ಟಿ.ಆರ್.ಸತೀಶ್‌ಕುಮಾರ್, ಟಿ.ಆರ್. ಪ್ರಭಾಕರ್, ಉಪನ್ಯಾಸಕರಾದ ಲೇಕೇಶ್, ಅಭಿಜಿತ್, ಶವನಂಜು, ರಮ್ಯಾ, ಮಹಾದೇವ, ಪ್ರಸಾದ್, ಚಂದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net