

ರೋಣ: ಯುವಕರು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯಯುತ ಜೀವನ ನಡೆಸಬೇಕು ಎಂದು ಶ್ರೀ ಮರುಳ ಸಿದ್ಧೇಶ್ವರ ಮಠದ ಶ್ರೀ ಮರುಳ ಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಸವಡಿ ಗ್ರಾಮದ ಶ್ರೀ ಮರಳು ಸಿದ್ಧೇಶ್ವರಮಠದಲ್ಲಿ ಶ್ರೀ ಸೋಮಯ್ಯ ಮಹಾಸ್ವಾಮಿಗಳ 28ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಸರ್ವಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಕಾಂಗ್ರೆಸ್ ಕಮಿಟಿ ರಾಜ್ಯ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತನಾಡಿ, ನವ ದಂಪತಿಗಳು ಸಮಾಜಕ್ಕೆ ಮಾದರಿಯಾಗಬೇಕು. ತಂತ್ರಜ್ಞಾನ ಯುಗದಲ್ಲಿ ಜೀವನ ಬದಲಾವಣೆಯತ್ತ ಸಾಗಿದೆ. ಸತಿ-ಪತಿಗಳು ದಾಂಪತ್ಯ ಜೀವನದಲ್ಲಿ ಅರಿತು ಬಾಳಬೇಕು ಎಂದರು.
ಸಾನ್ನಿಧ್ಯವನ್ನು ಶಿವಯ್ಯ ಮಹಾಸ್ವಾಮಿಗಳು, ಡಾ.ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿಗಳು, ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು, ಪೂರ್ಣಾನಂದ ಭಾರತಿ ಸ್ವಾಮಿಗಳು, ಶಿವಶರಣ ಗದಿಗೆಪ್ಪಜ್ಜನವರು, ಮಾತೋಶ್ರೀ ದಯಾಭಾರತಿ, ಸದ್ಗುರು ಬಸವಪ್ರಭು ಮಹಾಸ್ವಾಮಿಗಳು, ಹೂವಯ್ಯ ಶ್ರೀಗಳು, ನಾಗಲಿಂಗ ಮಹಾಸ್ವಾಮಿಗಳು ಇತರರು ವಹಿಸಿದ್ದರು. ಸುರೇಶ ನಡುವಿನಮನಿ, ಸಂಗಪ್ಪ ಹುಣಸಿಮರದ, ಮೈಲಾರಪ್ಪ ಚಳ್ಳಮರದ, ಸಿದ್ದು ಹಲಗಿ, ಶಿವಪ್ಪ ಹುಣಸಿಮರದ, ಶರಣಪ್ಪ ಮಲ್ಲಾಪುರ, ಕನಕಪ್ಪ ಮಲ್ಲಾಪುರ, ಪರಸಪ್ಪ ಪೂಜಾರ, ಶೇಖಪ್ಪ ಹಡಗಲಿ ಇತರರಿದ್ದರು.