ಯೋಗದಲ್ಲಿ ಗಮನ ಸೆಳೆದ ಪುಟಾಣಿಗಳು

yooga
Published on

ಮಡಿಕೇರಿ: ಪೊನ್ನಂಪೇಟೆಯ ಮದರ್ಸ್ ಆರ್ಮ್ ಮೊಂಟೆಸ್ಸರಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಶನಿವಾರ ಆಚರಿಸಲಾಯಿತು.

ಪುಟಾಣಿ ಮಕ್ಕಳು ವಿವಿಧ ಭಂಗಿಗಳ ಯೋಗವನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಅಲ್ಲದೆ ಇತರರಿಗೆ ಮಾದರಿಯಾದರು. ಶಿಕ್ಷಕರು ಹಾಗೂ ಸಿಬ್ಬಂದಿಗಳು ಕೂಡ ಪುಟಾಣಿಗಳೊಂದಿಗೆ ಯೋಗ ಮಾಡಿದರು.

ಯೋಗಾಸನದ ಮಹತ್ವವನ್ನು ವಿವರಿಸಿದ ಮದರ್ಸ್ ಆರ್ಮ್ ಮೊಂಟೆಸ್ಸರಿ ಶಾಲೆಯ ಸಂಸ್ಥಾಪಕಿ ವಿದ್ಯಾಶ್ರೀ ಅಶೋಕ್ ಭಟ್ ಅವರು, ಆರೋಗ್ಯಕರ ಜೀವನಕ್ಕೆ ಬಾಲ್ಯದಿಂದಲೇ ಯೋಗಾಭ್ಯಾಸ ಮಾಡಿಸುವುದು ಅತ್ಯಗತ್ಯವಾಗಿದೆ. ಜೀವನ ಶೈಲಿಯನ್ನು ಉತ್ತಮಗೊಳಿಸಲು ಯೋಗ ಸಹಕಾರಿಯಾಗಿದೆ ಎಂದರು.

ತರಬೇತುದಾರರಾದ ಪ್ರೇಕ್ಷ ಭಟ್, ಶಾಲಾ ಸಿಬ್ಬಂದಿಗಳಾದ ಬಿ.ಸೌಮ್ಯ, ಜಮುನಾ, ಶರಣ್ಯ, ಸಿಲ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net