ವಚನ ಸಾಹಿತ್ಯ ಇಂದಿಗೂ ಪ್ರಸ್ತುತ

SHARANA
ಕುಷ್ಟಗಿಯ ರತ್ನಾ ಪಡಿ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಯಲಬುರ್ಗಾದ ಶರಣೆ ಉಮಾದೇವಿ ಪಾಟೀಲರನ್ನು ಬಸವ ಮಹಿಳಾ ಕೇಂದ್ರ ಹಾಗೂ ಬಣಜಿಗ ಮಹಿಳಾ ಘಟಕದ ಪದಾಧಿಕಾರಿಗಳು ವಚನ ಸಾಹಿತ್ಯದ ಪುಸ್ತಕ ನೀಡಿ ಗೌರವಿಸಿದರು. ಪ್ರಭಾವತಿ ಬಂಗಾರಶೆಟ್ಟರ್, ಶಿಲ್ಪಾ ಸುಂಕದ್, ದೀಪಾ ವೈಜಾಪುರ ಇತರರು ಇದ್ದರು.
Published on

ಕುಷ್ಟಗಿ: ವಚನ ಸಾಹಿತ್ಯ ಇಂದಿಗೂ ಪ್ರಾಮುಖ್ಯತೆ ಪಡೆದಿದೆ ಎಂದು ಯಲಬುರ್ಗಾದ ಶರಣೆ ಉಮಾದೇವಿ ಪಾಟೀಲ್ ಹೇಳಿದರು.
ಬಸವ ಮಹಿಳಾ ಕೇಂದ್ರದಿಂದ ಬಣಜಿಗ ಮಹಿಳಾ ಘಟಕದ ಸಹಯೋಗದಲ್ಲಿ ಪಟ್ಟಣದ ರತ್ನಾ ಪಡಿ ಅವರ ನಿವಾಸದಲ್ಲಿ ಬುಧವಾರ ಏರ್ಪಡಿಸಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾಮನೆ ಕಾರ್ಯಕ್ರಮ


12ನೇ ಶತಮಾನದಲ್ಲಿ ಬಸವಾದಿ ಪ್ರಮುಖರು ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಬಸವಣ್ಣ ಸೇರಿ ಇನ್ನಿತರ ವಚನಕಾರರ ವಚನಗಳು ಇಂದಿಗೂ ಪ್ರಸ್ತುತ ಎನಿಸಿವೆ. ವಚನ ಸಾಹಿತ್ಯದ ಅಧ್ಯಯನದ ಜತೆಗೆ ಇಂದಿನ ಮಕ್ಕಳಿಗೆ ಅವುಗಳ ಪ್ರಾಮುಖ್ಯತೆ ತಿಳಿಸಿಕೊಡುವ ಕಾರ್ಯವಾಗಬೇಕಿದೆ ಎಂದರು.

ಇದನ್ನೂ ಓದಿ: ವಚನ ಸಾಹಿತ್ಯ ಅತ್ಯಮೂಲ್ಯವಾಗಿರುವ ಸಾಹಿತ್ಯ: ಡಾ. ತೋಂಟದ ಸಿದ್ಧರಾಮ ಶ್ರೀಗಳು
ಅಧ್ಯಕ್ಷತೆ ವಹಿಸಿದ್ದ ಪ್ರಭಾವತಿ ಬಂಗಾರಶೆಟ್ಟರ್ ಮಾತನಾಡಿ, ವಚನ ಸಾಹಿತ್ಯ ಹಾಗೂ ಅಧ್ಯಾತ್ಮದ ಅರಿವು ಮೂಡಿಸುವ ಸಲುವಾಗಿ ಬಸವ ಮಹಿಳಾ ಕೇಂದ್ರದಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗಿದೆ.

ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕಿದೆ ಎಂದರು. ಶಿಲ್ಪಾ ಸುಂಕದ್, ದೀಪಾ ವೈಜಾಪುರ, ಸವಿತಾ ಮಳಗಿ, ಗೌರಮ್ಮ ಕುಡತಿನಿ, ರತ್ನಾ ಹೊಸಹೊಕ್ಕಲ್, ರೂಪಾ ಕುಡತಿನಿ, ಅನಸೂಯಾ, ನಿರ್ಮಲಾ ಪಟ್ಟಣಶೆಟ್ಟರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net