ಸಾಹಿತಿ ಡಾ.ಜೋರಾಪುರಗೆ ರಾಷ್ಟ್ರೀಯ ಗೌರವ ಪ್ರಶಸ್ತಿ

25Jaggu4
ಬೆಳಗಾವಿಯ ಹಿರಿಯ ಸಾಹಿತಿ ಡಾ.ಸಿ.ಕೆ.ಜೊರಾಪುರ ಅವರಿಗೆ ಮುಂಬೈನಲ್ಲಿ ನಡೆದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ರಾಷ್ಟ್ರೀಯ ಗೌರವ ಪ್ರಶಸ್ತಿ’ ನೀಡಲಾಯಿತು. ಡಾ. ಮಹೇಶಗೌಡ, ಎಂ. ರತ್ನಾಕರ ಶೆಟ್ಟಿ ಇತರರಿದ್ದರು.
Published on

ಬೆಳಗಾವಿ: ಮುಂಬೈನ ಮಾತುಂಗಾದಲ್ಲಿ ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ವಿಶ್ವವಿದ್ಯಾಲಯ, ಇಂಟರ್‌ನ್ಯಾಷನಲ್ ಅಕ್ರಡಿಶನ್ ಆರ್ಗನೈಜೇಷನ್ ವತಿಯಿಂದ ಶನಿವಾರ ಆಯೋಜಿಸಿದ್ದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳಗಾವಿಯ ಹಿರಿಯ ಸಾಹಿತಿ ಡಾ.ಸಿ.ಕೆ.ಜೊರಾಪುರ ಅವರಿಗೆ ‘ರಾಷ್ಟ್ರೀಯ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಧಾರ್ಮಿಕತೆ, ಸಂಸ್ಕೃತಿ ಒಳಗೊಂಡಂತೆ ಕೃತಿಗಳನ್ನು ರಚನೆ ಮಾಡುವ ಮೂಲಕ ಉಪನ್ಯಾಸಗಳನ್ನು ಏರ್ಪಡಿಸುವುದು, ರಾಷ್ಟ್ರೀಯತೆ ಬಗ್ಗೆ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಡಾ. ಸಿ.ಕೆ. ಜೋರಾಪುರ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ದಾದಾಸಾಹೇಬ್ ಫಾಲ್ಕೆ ಅವರ ಮೊಮ್ಮಗ ಚಂದ್ರಶೇಖರ ಪುಸಾಳ್ಕರ ಪಾಲ್ಕೆ ಹಾಗೂ ಮುಂಬೈ ಹೈಕೋರ್ಟ್ ವಕೀಲ ಜಿ.ಎಂ.ವಾಗೀಶ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಡಾ. ಶಶಿಕಲಾ ಬಿ., ಗುಲ್ಬರ್ಗ ವಿಶ್ವವಿದ್ಯಾಲಯಯದ ಪ್ರಾಚಾರ್ಯ ಡಾ. ಮಂಗಳಾ ಪಟೇಲ್ ಮುಂತಾದ ಗಣ್ಯರು ಇದ್ದರು.

ಅಂತಾರಾಷ್ಟ್ರೀಯ ಸಾಂಸ್ಕೃತಿಕ ರಾಯಭಾರಿ ಡಾ.ಮಹೇಶಗೌಡ, ಎಡಿಯು ಸಂಸ್ಥಾಪಕ ನಿರ್ದೇಶಕ ಎಂ. ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net