

ಬ್ಯಾಡಗಿ: ಸಾವಿರಾರು ಜನರ ಬದುಕನ್ನು ಬದಲಿಸುವ ಸಾಮರ್ಥ್ಯ, ಸಮಾಜ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರಿಗೂ ಅಗತ್ಯ ಜ್ಞಾನ ಭಂಡಾರ ಲಭ್ಯವಾಗಲಿದೆ ಎಂದು ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಹೇಳಿದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಸಾಧಕರ ಮಾಲೆ’ಗೆ ಲೇಖನ ಬರೆದ ಸಾಹಿತಿಗಳಿಗೆ ಪಟ್ಟಣದ ತಾಲೂಕು ಕಸಾಪ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ ಮಾತನಾಡಿದರು. ಲೇಖನ ಬರೆದ ಪ್ರಕಾಶ ಮನ್ನಂಗಿ, ಮಹದೇವ ಕರಿಯಣ್ಣನವರ, ಮಲ್ಲಪ್ಪ ಕರೇಣ್ಣನವರ, ಶೋಭಾ ತಾಪ್ಸೆ, ಜೀವರಾಜ ಛತ್ರದ, ಸಂಧ್ಯಾರಾಣಿ ದೇಶಪಾಂಡೆ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಉಪನ್ಯಾಸಕ ಡಾ.ಪಿ.ಟಿ. ಲಕ್ಕಣ್ಣವರ, ಡಾ.ಆನಂದ ಮುದಕಮ್ಮನವರ, ಪಿ.ಎಂ. ರಾಮಗಿರಿ, ಎಸ್.ಡಿ. ಬಾಲಾಜಿರಾವ, ಮಲ್ಲಿಕಾರ್ಜುನ ಬಳ್ಳಾರಿ, ಗೀತಕ್ಕ ಕಬ್ಬೂರ, ಎನ್.ಎಫ್. ಹರಿಜನ, ಎಸ್.ಬಿ. ಇಮ್ಮಡಿ, ರಾಜಶೇಖರ ಹೊಸಳ್ಳಿ, ಶಕುಂತಲಾ ದಾಳೇರ, ಇಂದಿರಾ ಕಂಕೂರಿ, ಎನ್.ಎಚ್. ನಾಗನೂರ. ಎಂ.ಎ. ಪಠಾಣ ಇದ್ದರು.