ವಿಶೇಷ ಉಪನ್ಯಾಸ ಕಾರ್ಯಕ್ರಮ

sahithya
Published on

ಕಾರ್ಕಳ: ಸನಾತನ ಭಾರತೀಯ ಪರಂಪರೆಯನ್ನು ಅರಿಯಬೇಕಾದರೆ ಸ್ವಾಮಿ ವಿವೇಕಾನಂದರನ್ನು ಓದಬೇಕು. ಜಗತ್ತಿನ 20 ನಾಗರಿಕತೆಗಳು ಈಗಾಗಲೇ ಸಮಾವೇಶವಾಗಿದೆೆ. ಆದರೆ ಸನಾತನ ಭಾರತೀಯ ಸಂಸ್ಕೃತಿ ಇಂದು ಜೀವಂತವಾಗಿ ಉಸಿರಾಡುತ್ತಿದೆ. ಏಕೆಂದರೆ ಸನಾತನ ಭಾರತೀಯ ಸಂಸ್ಕೃತಿ ವ್ಯಕ್ತಿ ಆಧಾರಿತವಲ್ಲ, ಬದಲಾಗಿ ತತ್ವ ಆಧಾರಿತವಾದುದು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀವಿರೇಶಾನಂದ ಸರಸ್ವತಿ ಅಭಿಪ್ರಾಯ ಪಟ್ಟರು. ಕಾರ್ಕಳ ಸಾಹಿತ್ಯ ಸಂಘ ಆಯೋಜಿಸಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸನಾತನ ಭಾರತೀಯ ಪರಂಪರೆ ಬಗ್ಗೆ ಅವರು ಉಪನ್ಯಾಸ ನೀಡಿದರು. ಭಾರತ ಜ್ಞಾನದ ನೆಲೆಗಟ್ಟನ್ನು ಸೂಚಿಸುವ ಜಾಗ ನಮ್ಮ ಅದ್ಭುತವಾದ ಋಷಿ ಪರಂಪರೆ ದಿನದಿಂದ ದಿನಕ್ಕೆ ಮುಂದುವರೆಯುತ್ತಿದೆ. ನಮ್ಮ ರಾಮಾಯಣ ಮಹಾಭಾರತಗಳು ಸಾರುವ ಮೌಲ್ಯಗಳು ಸಾರ್ವಕಾಲಿಕವಾದುದು. ಹಾಗಾಗಿ ಒಂದಲ್ಲ ಒಂದು ದಿನ ಭಾರತೀಯ ಧರ್ಮವೇ ವಿಶ್ವಧರ್ಮವಾಗುವುದರಲ್ಲಿ ಸಂದೇಹವಿಲ್ಲವೆಂದರು.

ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಆಶ್ರಮ ಮಂಗಳೂರಿನ ಅಧ್ಯಕ್ಷ ಶ್ರೀ ಜಿತಕಾಮಾನಂದಜಿ ಮಾತನಾಡಿ, ಸ್ವಾತಂತ್ರೃ ಮತ್ತು ಸ್ವೇಚ್ಚಾಚಾರ ಒಂದೇ. ಅಲ್ಲಿ ಹಕ್ಕುಗಳನ್ನು ಪ್ರತಿವಾದಿಸುವವರಿಗೆ ಜವಾಬ್ದಾರಿ ಅರಿವು ಇರಬೇಕು, ಭಾರತೀಯರಿಗೆ ಭಾರತೀಯತೆಯನ್ನು ಪರಿಚಯಿಸುವುದು ಕಷ್ಟ. ರೋಗಗ್ರಸ್ತ ಮನಸ್ಸುಗಳು ಆರೋಗ್ಯವಂತ ವಿಚಾರಗಳನ್ನು ಸುಲಭದಲ್ಲಿ ಸ್ವೀಕರಿಸುವುದಿಲ್ಲ. ಹಾಗಾಗಿ ನಾವೆಲ್ಲ ಸ್ವಚ್ಛ ಮನಸ್ಸಿನಿಂದ ಪರಂಪರೆ ತಿಳಿಯುವ ಮನಸ್ಸು ಮಾಡಬೇಕೆಂದರು. ವೈ ಅನಂತಪದ್ಮನಾಭ ಭಟ್ ಪ್ರಾರ್ಥನೆಗೈದರು. ಕೆ.ಪಿ.ಶೆಣೈ ಸ್ವಾಗತಿಸಿದರು. ಪ್ರೊ.ಬಿ.ಪದ್ಮನಾಭಗೌಡ ವಂದಿಸಿದರು. ಬಿ.ಕೆ ಈಶ್ವರಮಂಗಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net