ಬದುಕಿನ ಆಶಯ ಬರೆಯುವುದೇ ಸಾಹಿತ್ಯ

6 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಯಾವುದೇ ದೌರ್ಬಲ್ಯವನ್ನು ಸ್ವಲ್ಪ ಬದಲಾಯಿಸಿಕೊಂಡರೆ ನಮ್ಮೊಳಗಿನ ಸಾಮರ್ಥ್ಯ ನಿರೂಪಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪದವಿ ಕಾಲೇಜಿನ ಹಿರಿಯ ಉಪನ್ಯಾಸಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಸಂಭ್ರಮ-50 ನಿಮಿತ್ತ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ 6ನೇ ದಿನದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಅನ್ಯ ಭಾಷೆಗಳನ್ನು ಸಹ ಪ್ರೀತಿಸಿ ನಿಭಾಯಿಸುವುದು ಮುಖ್ಯ. ಆದಿ-ಅನಾದಿ ಕಾಲದಿಂದಲೂ ಐತಿಹಾಸಿಕ ಚಾರಿತ್ರೃದೊಂದಿಗೆ ವಚನಕಾರರೂ ಸಹ ಕಾಯಕ ಸೇರಿ ಮಾನವೀಯ ಮೌಲ್ಯ ಕನ್ನಡದ ಸಂಸ್ಕೃತಿಯಲ್ಲಿ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದಾರೆ. ಬದುಕಿನ ಆಶಯವನ್ನೇ ಬರೆಯುವುದೇ ಸಾಹಿತ್ಯ ಎಂದರು.
ಡಾ. ಎಸ್.ವಿ. ಹೆಗಡಾಳ ಮಾತನಾಡಿ, ಕನ್ನಡ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವಲ್ಲಿ ಧಾರವಾಡ ವಿಶೇಷ ನೆಲ ಹೊಂದಿದೆ. ಎಲ್ಲ ವಿಷಯಗಳಲ್ಲೂ ಗಂಭೀರ ಚರ್ಚೆ, ಗೋಷ್ಠಿ, ಸಂಗೀತ ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತದೆ. ಅದರಲ್ಲೂ ಸಂಘದ ಕಾರ್ಯ ಚಟುವಟಿಕೆಗಳನ್ನು ಗಮನಿಸಿದರೆ ಇದು ಗಿನ್ನಿಸ್ ರಿಕಾರ್ಡ್ ಬುಕ್‌ನಲ್ಲಿ ದಾಖಲು ಆಗಬೇಕು. ಅಂತಹ ಜನಪರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು ಶ್ಲಾಘನೀಯ ಎಂದರು.
ಡಾ. ಕಮಲಾ ಢವಳೆ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಬಸವರಾಜ ಶಿಗ್ಗಾಂವ, ಜ್ಯೋತಿ ಯರಗಂಬಳಿಮಠ, ಮಲ್ಲೇಶ ಮುಳಗುಂದ ಕನ್ನಡ ನಾಡು-ನುಡಿ ಸಂಸ್ಕೃತಿಯ ಗೀತ ಗಾಯನ ಪ್ರಸ್ತುತಪಡಿಸಿದರು.
ಡಾ. ಜಿ.ವಿ. ಕೊಕ್ಕಳ, ಡಾ. ಜಿ.ಎಂ. ಹೂಗಾರ, ಡಾ. ಮಾನಸಾ, ಡಾ. ಆರ್.ಬಿ.ಯರಗುಪ್ಪಿ ಸಿಎಸ್‌ಐ ವಾಣಿಜ್ಯ ಶಾಸ್ತ್ರದ ಪದವಿ ಹಾಗೂ ಕ್ಲಾಸಿಕ್ ಪಿಯು ವಿದ್ಯಾರ್ಥಿಗಳು, ಇತರರು ಇದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಗುರು ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net