ಅಭಿವ್ಯಕ್ತಿಯ ಮುಖ್ಯ ಸಾಧನ ಸಾಹಿತ್ಯ

Literature is the main means of expression.
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಲೋಕಾಪುರ ವಲಯ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್.ಎನ್. ಹಿರೇಮಠ, ಎಸ್.ಬಿ. ಕೃಷ್ಣಗೌಡರ, ಸಿದ್ದ ದಿವಾಣಿ, ವಿಜಯಲಕ್ಷ್ಮೀ ಕಗಲಗೊಂಬ ಇನ್ನಿತರರು ಇದ್ದರು.
Published on

ಲೋಕಾಪುರ : ಕನ್ನಡ ಸಾಹಿತ್ಯ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ವರ್ತಮಾನ ಕಾಲದ ನಿತ್ಯ ಅನುಭವಗಳೇ ಸಾಹಿತ್ಯ ರೂಪದಲ್ಲಿ ಮೂಡಿಬರುತ್ತವೆ. ಅನುಭವದ ಅಭಿವ್ಯಕ್ತಿಯ ಮುಖ್ಯ ಸಾಧನ ಸಾಹಿತ್ಯ ಎಂದು ನಿವೃತ್ತ ಪ್ರಾಚಾರ್ಯ ಎಸ್.ಬಿ. ಕೃಷ್ಣಗೌಡರ ಹೇಳಿದರು.

ಪಟ್ಟಣದ ವಿದ್ಯಾಚೇತನ ಶಾಲಾ ಆವರಣದಲ್ಲಿ ಭಾನುವಾರ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಲೋಕಾಪುರ ವಲಯ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ವೈಚಾರಿಕೆ ದೃಷ್ಠಿಕೋನ, ಮನೋಭಾವ ಹೊಂದಿದ್ದಾರೆ. ಪ್ರತಿಭೆ ಅನಾವರಣಕ್ಕೆ ಅವಕಾಶ, ಪ್ರೋತ್ಸಾಹದ ಅಗತ್ಯವಿದೆ. ರಾಜ್ಯದಲ್ಲಿರುವ ಮಕ್ಕಳ ಸಾಹಿತಿಗಳು ಪುಸ್ತಕ, ಸಾಹಿತ್ಯ, ಕಥೆ, ಕವನ ಒಳಗೊಂಡ ಪತ್ರಿಕೆಗಳನ್ನು ಆಯಾ ತಾಲೂಕುವಾರು ಪ್ರಕಟ ಮಾಡಿ ಪ್ರೋತ್ಸಾಹ ನೀಡಬೇಕು ಎಂದರು.

ಬೋಕರ್ ಪ್ರಶಸ್ತಿ ಪಡೆದ ಮುಸ್ತಾಕ ಬಾನು ಅವರ ಎದೆಯ ಹಣತೆ ಎಂಬ ಕಾದಂಬರಿ ಬಗ್ಗೆಯೂ ವಿವರಿಸಿದರು. ಸಾಹಿತಿಗಳು ಹಾಗೂ ಉಪನ್ಯಾಸಕರಾಗಿ ಆಗಮಿಸಿದ ಸಿದ್ದು ದಿವಾಣ ಮಾತನಾಡಿ, ಮಕ್ಕಳ ಸಾಹಿತ್ಯ ಎಂದರೆ ಮಕ್ಕಳು ಬರೆದ ಸಾಹಿತ್ಯದಲ್ಲಿ ಮಕ್ಕಳಿಗಾಗಿ ಬರೆದ ಸಾಹಿತ್ಯ ಎಂದರು. ಮಕ್ಕಳ ಸಾಹಿತ್ಯದ ಮೂಲ ಕರ್ತೃ ಜನಪದರು. ಲಾಲಿ ಹಾಡು, ಜೋಗುಳಪದಗಳಿಂದ ಮಕ್ಕಳ ಸಾಹಿತ್ಯ ಪ್ರಾರಂಭವಾಗುವುದು ಎಂದರು. ಮಕ್ಕಳ ಸಾಹಿತ್ಯ ಪರಿಷತ್ ತಾಲೂಕಾಧ್ಯಕೆ ವಿಜಯಲಕ್ಷ್ಮ್ಮೀ ಕಗಲಗೊಂಬ ಮಾತನಾಡಿ, ಮಕ್ಕಳ ಸಮಗ್ರ ಸರ್ವಾಂಗೀಣ ಅಭಿವೃದ್ಧಿಗೆ ಸಾಹಿತ್ಯ ಪೂರಕ ಎಂದರು.

ಸುರೇಶ ಹಿರೇಮಠ, ಸಾಹಿತಿ ಬಾಪು ಖಾಡೆ, ವಿದ್ಯಾಚೇತನ ಶಾಲೆಯ ಅಧ್ಯಕ್ಷ ಎಸ್.ಎಂ. ರಾಮದುರ್ಗ, ಪ್ರಭು ಹೊನವಾಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಲೋಕಾಪುರ ವಲಯ ಘಟಕದ ಅಧ್ಯಕ್ಷ ಡಾ. ಸಂತೋಷ ಶೆಟ್ಟರ, ಉಪಾಧ್ಯಕ್ಷ ಹನುಮಂತ ಪೂಜಾರ, ಡಾ. ಕೆ.ಎಲ್. ಉದಪುಡಿ, ವಿ.ಬಿ.ಮಾಳಿ, ಎಸ್.ಆರ್. ಹುಂಡೇಕಾರ, ಕಲ್ಲಪ್ಪಣ್ಣ ಸಬರದ, ಎಸ್.ಡಿ. ನೀಲಗುಂದ, ರಮೇಶ ಅರಕೇರಿ, ಹಣಮಂತ ಚಿಕ್ಕೂಡ, ಆರ್.ಎಚ್. ನಿಡೋಣಿ, ಬಿ.ಎ. ಹುಣಶಿಕಟ್ಟಿ, ಎಸ್.ಕೆ. ಉದಪುಡಿ, ಷಣ್ಮೂಖಪ್ಪ ಕೋಲ್ಹಾರ, ಡಾ. ಬಸವರಾಜ ಉದಪುಡಿ, ರಫೀಕ ದಪ್ಪೇದಾರ, ಬಾಬು ಗುದಗಿ, ಪ್ರವೀಣ ಗಂಗಣ್ಣವರ, ಪತ್ರಕರ್ತ ಹಸನಡೋಂಗ್ರಿ ಮಹಾಲಿಂಗಪುರ, ವಿವೇಕ ಮರಾಠಿ, ಅರ್ಜುನ ಮಾಳಿ, ಮಂಜುನಾಥ ಗಣಾಚಾರಿ, ಗಂಗವ್ವ ಕಮತಗಿ, ಅನೀಲ ಹಂಚಾಟೆ, ಚನ್ನವೀರಪ್ಪ ಮುದ್ನೂರ, ತುಳಜಪ್ಪ ಮುದ್ದಾಪುರ, ರೇಖಾ ನರಹಟ್ಟಿ, ದುರ್ಗವ್ವ ನಡುವಿನಮನಿ, ಅಶೋಕ ಚನ್ನಪ್ಪಗೌಡರ, ಮುರಗೇಶ ಜಾಲಿಕಟ್ಟಿ, ಶಿವ ನಾವ್ಹಿ, ಸವಿತಾ ದೊಡ್ಡನ್ನವರ, ಮಹಾದೇವಿ ಸಗರಮ್ಮನವರ, ಸ್ಥಳೀಯ ಸಾಹಿತಿಗಳು ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net