ಬದುಕು ರೂಪಿಸುವ ಸಾಧನ ಸಾಹಿತ್ಯ

SAHI
Published on

ಬ್ರಹ್ಮಾವರ: ಸಾಹಿತ್ಯ ಮನುಷ್ಯನ ಬದುಕು ರೂಪಿಸಬಲ್ಲ ಉತ್ತಮ ಸಾಧನ ನಟ, ನಿರ್ದೇಶಕ ಎಸ್.ಎನ್.ಸೇತುರಾಮ್ ಹೇಳಿದರು.

ಬಾರಕೂರಿನಲ್ಲಿ ಶಾಂತಿವನ ಟ್ರಸ್ಟ್ ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಸಂಘ ಸಂಸ್ಥೆಗಳ ಸಹಕಾರದಲ್ಲಿ ಶನಿವಾರ ಉಡುಪಿ ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳ 21ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ ಪೋಷಿಸುವ ಊರು ಸಮೃದ್ಧ ಎಂದು ಪರಿಗಣಿಸಬಹುದು. 365 ದೇವಾಲಯಗಳ ನಗರ ಬಾರಕೂರು ಧಾರ್ಮಿಕ ಮತ್ತು ಸಾಂಸ್ಕೃತಿಕ, ಸಾಹಿತ್ಯಿಕವಾಗಿ ಬೆಳೆಯುತ್ತಿರುವುದು ಕನ್ನಡ ಭಾಷೆಗೆ ಬಲ ಬಂದಂತಾಗಿದೆ ಎಂದರು.

ಕಾರ್ಕಳ ಹಿರಿಯಂಗಡಿ ಎಸ್‌ಎನ್‌ವಿ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿ ಬ್ರೋವಿನ ಅಗೇರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಘಟಕ ರಾಮ ಭಟ್ಟ ಸಜಂಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಸ್ವರಚಿತ ಕವನ ಸಂಕಲನವನ್ನು ರೋಟರಿ ರಾಜಾರಾಮ್ ಶೆಟ್ಟಿ ಬಿಡುಗಡೆಗೊಳಿಸಿದರು. ಶಾಲೆಗಳಲ್ಲಿ ರಾಷ್ಟ್ರಮಟ್ಟ ಪ್ರತಿನಿಧಿಸಿದವರನ್ನು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಡಾ.ಅಶೋಕ ಕಾಮತ್, ಡಾ.ಶಶಿಕಾಂತ್ ಜೈನ್, ಶ್ರೀನಿವಾಸ್ ಶೆಟ್ಟಿಗಾರ್, ಕಿಶೋರ್ ಗೊನ್ಸಾಲ್ವೀಸ್, ಸೀತಾರಾಮ್ ತೋಳ್ಪಾಡಿತ್ತಾಯ, ಅಜಿತ್ ಕುಮಾರ್ ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳ ಕವಿಗೋಷ್ಠಿಯಲ್ಲಿ ವೈಶಾಲಿ ಅಧ್ಯಕ್ಷತೆ ವಹಿಸಿದ್ದು, ಮಕ್ಕಳ ಸಾಹಿತಿ ರಾಧೇಶ್ ತೋಳ್ಪಾಡಿ ಸಮನ್ವಯಕಾರರಾಗಿ ಮತ್ತು 2 ವಿಚಾರಗೋಷ್ಠಿಯಲ್ಲಿ ಸಂವಾದಕರಾಗಿ ಸೇತುರಾಮ್ ಅವರಿಂದ ಸಾಹಿತ್ಯ ಮತ್ತು ಸತ್ಯಾನ್ವೇಷಣೆ, ಮಂಗಳೂರಿನ ಗೋಪಾಡ್ಕರ್ ಅವರಿಂದ ಸ್ವರೂಪ- ಸ್ಮತಿ ಶಿಕ್ಷಣ ಜರುಗಿತು.

ಸಮಾರೋಪ ಸಮಾರಂಭ

ಸಂಜೆ ಸಮಾರೋಪ ಸಮಾರಂಭದಲ್ಲಿ ನಡೂರು ಶ್ರೀ ವಾಣಿ ವಿದ್ಯಾವರ್ಧಕ ಸಂಘದ ಗೌರವ ಮಾರ್ಗದರ್ಶಕ ಸಖಾರಾಮ್ ಸೋಮಯಾಜಿ ಉಪಸ್ಥಿತಿಯಲ್ಲಿ, ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸಮಾರೋಪ ಭಾಷಣ ಮಾಡಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ ಶ್ರೀ ರಾಮಕೃಷ್ಣ ಮಿಷನ್ ಆಶ್ರಮ ಬೆಳಗಾವಿ, ಬಾರಕೂರು ಆನ್ ಲೈನ್‌ಡಾಟ್ ಕಾಮ್ ರೋಟರಿ ಕ್ಲಬ್ ಬಾರಕೂರು ಸ್ವಾಮಿ ವಿವೇಕಾನಂದ ಮತ್ತು ಸ್ವಾಮಿ ಪುರುಷೋತ್ತಮಾನಂದಜಿ ಚಾರಿಟೆಬಲ್ ಟ್ರಸ್ಟ್ ಬಾರಕೂರು ಕಾರ್ಯಕ್ರಮಕ್ಕೆ ಸಹಭಾಗಿತ್ವ ನೀಡಿತ್ತು.

ಮಕ್ಕಳಲ್ಲಿ ಮಾನವೀಯ ಮೌಲ್ಯ ತುಂಬಿಸಲು ಮಕ್ಕಳ ಸಾಹಿತ್ಯ ಸಮ್ಮೇಳನ ಪೂರಕ. ಬಾಲ ಸಾಹಿತ್ಯ, ಅಜ್ಜಿ ಕಥೆಗಳು, ಗೋವಿನ ಹಾಡು, ತಿರುಕನ ಕನಸು, ಪಂಚತಂತ್ರದ ಕಥೆಗಳು ಬಾಲ್ಯದಲ್ಲಿ ಮನಸ್ಸು ಸೇರಿಕೊಂಡರೆ ರಾಷ್ಟ್ರಕ್ಕೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ. ದಿನದಿಂದ ದಿನಕ್ಕೆ ಪುಸ್ತಕ ಓದುಗರು ಕ್ಷೀಣಿಸುತ್ತಾ ಬಂದು ಮೊಬೈಲ್ ದಾಸರಾಗುತ್ತಿರುವುದು ಸಮಾಜ ಎದುರಿಸುತ್ತಿರುವ ದೊಡ್ಡ ದುರಂತ. ಬ್ರೋವಿನ ಅಗೇರ ಸಮ್ಮೇಳನ ಅಧ್ಯಕ್ಷ https://www.vijayavani.net/construction-of-houses-for-needy-families https://www.vijayavani.net/karkala-taluk-irregular-committee-meeting

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net