ಸಾಹಿತ್ಯ ಭಾವನೆ ವ್ಯಕ್ತಪಡಿಸುವ ಮಾಧ್ಯಮ

sahitya sangha
ಸಂಸ್ಕೃತಿ ಸುಧಾ ಕಾರ್ಯಕ್ರಮವನ್ನು ಕಾರ್ಕಳ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಗೋವಿಂದ ಪ್ರಭು ಉದ್ಘಾಟಿಸಿದರು.
Published on

ಕಾರ್ಕಳ: ಸಾಹಿತ್ಯವು ಮಾನವನಿಗೆ ಜೀವನಾಧಾರ, ಮಾನವನ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಮಾಧ್ಯಮ ಸಾಹಿತ್ಯ. ಉತ್ತಮ, ಉನ್ನತ ವಿಚಾರಗಳು, ಭಾವನೆಗಳು ಮುಂದಿನ ಪೀಳಿಗೆಗೂ ಲಭ್ಯವಾಗಿಸುವ ಸಾಧನ ಸಾಹಿತ್ಯ ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಗೋವಿಂದ ಪ್ರಭು ಹೇಳಿದರು.

ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಕಾರ್ಕಳ ಸಾಹಿತ್ಯ ಸಂಘ ವತಿಯಿಂದ ರಾಮೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಸಂಸ್ಕೃತಿ ಸುಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಕಾರ್ಕಳ ಸಾಹಿತ್ಯ ಸಂಘದ ನಡುವೆ ಅವಿನಾಭಾವ ಸಂಬಂಧವಿದೆ. ಕಾರ್ಕಳದ ಜನತೆಗೆ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವಿರೇಶಾನಂದ ಸರಸ್ವತಿ ಅವರು ಲಲಿತ ಸಹಸ್ರನಾಮದ ಮಹತ್ವ ವಿವರಿಸಿದರು.

ಸಾಹಿತ್ಯ ಸಂಘ ಸದಸ್ಯೆ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಎಸ್.ನಿತ್ಯಾನಂದ ಪೈ ಉಪಸ್ಥಿತರಿದ್ದರು.

ಕಾರ್ಕಳದ ಅನಂತಪದ್ಮನಾಭ ಭಟ್ಟ ‘ಭಕ್ತ ಭೀಷ್ಮ’ ಹರಿಕಥಾ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ವಾನ್ ರಾಘವೇಂದ್ರ ಹೆಬ್ಬಾರ್ ತಬಲದಲ್ಲಿ ಹಾಗೂ ಕಟೀಲಿನ ವಿದ್ವಾನ್ ಪ್ರಕಾಶ್ ಸಪ್ರೆ ಹಾರ್ಮೋನಿಯಂನಲ್ಲಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net