ಸನ್ಮಾರ್ಗದಲ್ಲಿ ಕೊಂಡೊಯ್ಯುವ ಶಕ್ತಿ ಸಾಹಿತ್ಯಕ್ಕಿದೆ

Literature has the power to lead on the right path.
Literature has the power to lead on the right path.
Published on

ವಿಜಯಪುರ: ಸಾಹಿತ್ಯ ಯಾವುದೇ ಜಾತಿಗೆ ಸೀಮಿತವಲ್ಲ. ಅದು ಎಲ್ಲರನ್ನೂ ಅಪ್ಪಿಕೊಳ್ಳುತ್ತದೆ. ಅಂತಹ ಸಾಹಿತ್ಯವನ್ನು ಸಮಾಜಕ್ಕೆ ನೀಡುವ ಸಾಹಿತಿಗಳನ್ನು ಸಮಾಜವೂ ಅಪ್ಪಿಕೊಳ್ಳಬೇಕು ಎಂದು ನಿವೃತ್ತ ಡಿವೈಎಸ್​ಪಿ ಬಿ.ಆರ್​. ಚೌಕಿಮಠ ಹೇಳಿದರು.

ತಾಲೂಕಿನ ಮಖಣಾಪುರ ತಾಂಡಾದ ಗೋನಾಸಾದ ದೇವಸ್ಥಾನದ ಆವರಣದಲ್ಲಿ ಎಸ್​ಎಸ್​ಜಿಸಿ ಸೇವಾ ಟ್ರಸ್ಟ್​ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗಣಪತಿ ಚವಾಣ ಅವರ ಪುಸ್ತಕ ಬಿಡುಗಡೆ, ಎಸ್​ಎಸ್​ಎಲ್​ಸಿ, ಪಿಯುಸಿ ಪರೀೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗುರುವಂದನಾ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ವ್ಯಕ್ತಿಯನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸ ಮಾಡುತ್ತದೆ. ಸಾಹಿತಿ ಗಣಪತಿ ಚವಾಣ ಅವರ ಕೃತಿಗಳು ವಿದ್ಯಾರ್ಥಿ ಸಮುದಾಯಕ್ಕೆ ಮಾರ್ಗದರ್ಶಕವಾಗಿದ್ದು, ಅವರ ಾನಧಾರೆ ಹಾಗೂ ಕನ್ನಡ ವ್ಯಾಕರಣ ಪುಸ್ತಕಗಳು ಸ್ಪರ್ಧಾತ್ಮಕ ಪರೀೆಗಳನ್ನು ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿವೆ ಎಂದರು.

ಇಂಡಿ ಉಪ ವಿಭಾಗಾಧಿಕಾರಿ ಅನುರಾಧಾ ವಸದ ಮಾತನಾಡಿ, ಗುಣಮಟ್ಟದ ಶಿಣ ಪಡೆದಾಗ ಮಾತ್ರ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯ. ನಮ್ಮ ಬಹುತೇಕ ಸಮಸ್ಯೆಗಳಿಗೆ ಶಿಣದಲ್ಲೆ ಪರಿಹಾರ ಸಿಗಲು ಸಾಧ್ಯವಿದೆ. ವಿದ್ಯಾರ್ಥಿಗಳು ಉತ್ತಮ ಶಿಣ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ತುಳಸಿಗಿರೀಶ್​ ಫೌಂಡೇಷನ್​ ಅಧ್ಯ ಡಾ. ಬಾಬುರಾಜೇಂದ್ರ ನಾಯಿಕ ಮಾತನಾಡಿ, ಡಾ. ಬಿ.ಆರ್​. ಅಂಬೇಡ್ಕರ್​ ಅವರ ಸೂತ್ರಗಳಾದ ಶಿಣ, ಹೋರಾಟ, ಸಂಟನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಾನ ಸಂಸ್ಥೆ ಆಡಳಿತಾಧಿಕಾರಿ ಮೇಜರ್​ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿದರು. ಕೆಸರಟ್ಟಿಯ ಶಂಕರಲಿಂಗ ಗುರಪೀಠದ ಸೋಮಲಿಂಗ ಸ್ವಾಮೀಜಿ, ಗೋನಾಸಾದ ದೇವಸ್ಥಾನದ ವಾಲು ನಾಮದೇವ ಪೂಜಾರಿ, ಸಾಹಿತಿ ಗಣಪತಿ ಚವಾಣ, ನಿವೃತ್ತ ಶಿಕರಾದ ಪಿ.ಕೆ. ಬೋಗಾರ, ಬಿ.ಎಂ. ಡೊಳ್ಳಿ, ಬಾಪೂಜಿ ಲಮಾಣಿ, ರಾಜು ಚವ್ಹಾಣ, ಶಿಕ ಶ್ರೀಕಾಂತ ಧಾರೆಕರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net