ದೇಶ ಮೀರಿ ಮಹತ್ವ ಪಡೆಯುತ್ತಿರುವ ಸಾಹಿತ್ಯ

15 05 2025_BNG_RURAL_PAGE_5A
ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಕುವೆಂಪು ಓದು ಕಮ್ಮಟ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಪೊ.ಕೆ.ರವಿಚಂದ್ರ, ಪೊ.ಎಚ್​.ಇ.ರವಿಕುಮಾರ್​, ಪೊ.ಈರಣ್ಣ, ಪೊ.ಅಶ್ವತ್ಥನಾರಾಯಣ, ಪೊ.ಮಾಲಿನಿ, ಪೊ.ಸಾದಿಕ್​ಪಾಷಾ, ಪೊ.ಶ್ರೀನಿವಾಸ್​ ಆಚಾರ್​ ಇದ್ದರು.
Published on

ಹೊಸಕೋಟೆ : ಶ್ರೇಷ್ಠ ಸಾಹಿತ್ಯ ಕಲೆಯು ದೇಶ ಮೀರಿ ಮಹತ್ವ ಪಡೆಯುತ್ತಾ ಹೋಗುತ್ತಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯ ಪೊ.ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಹಯೋಗದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಕುವೆಂಪು ಓದು ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು, ಮತ ಪಂಥಗಳು ನಮ್ಮನ್ನು ಕುಬ್ಜರನ್ನಾಗಿ ಮಾಡಿದೆ. ಈ ಕುಬ್ಜತೆಯಿಂದ ಹೊರಬರಲು ಕುವೆಂಪು ಸಾಹಿತ್ಯ ಪ್ರೇರೇಪಿಸುತ್ತದೆ. ಮುಖ್ಯವಾಗಿ ಕುವೆಂಪು ಪ್ರತಿಪಾದನೆ ಮತ್ತು ಪ್ರತಿರೋಧ ಅರ್ಥ ಮಾಡಿಕೊಂಡು ಸಮಾಜಕ್ಕೆ ತೆರೆದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಕುವೆಂಪು ಅವರನ್ನು ಮತ್ತೆ ಮತ್ತೆ ಮುಖಾಮುಖಿಯಾಗುತ್ತಿರಬೇಕು ಎಂದರು.

ಸದಸ್ಯ ಸಂಚಾಲಕ ಪೊ.ನಾರಾಯಣ ಟ್ಟ ಮಾತನಾಡಿ, ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತರುವುದು, ಕನ್ನಡದ ಶ್ರೇಷ್ಠ ಕೃತಿಗಳನ್ನು ಜಾಗತಿಕ ಭಾಷೆಗಳಿಗೆ ಪರಿಚಯ ಮಾಡಿಕೊಡುವುದು ಕುವೆಂಪು ಭಾಷಾ ಭಾರತಿ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕುವೆಂಪು ಅವರನ್ನು ಪರಿಚಯಿಸಿ ಅವರ ಚಿಂತನೆಗಳನ್ನು ಮತ್ತಷ್ಟು ವಿಸ್ತರಿಸುವ ಕೆಲಸ ಮಾಡಲಾಗುತ್ತಿದೆ. ಈ ಓದು ವಿವೇಕದ ಜತೆಗೆ ವೈಚಾರಿಕ ಮನೋಭಾವ ತಂದು ಕೊಡಲಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪೊ.ರಾಮಲಿಂಗಪ್ಪ ಟಿ.ಬೇಗೂರು ಮಾತನಾಡಿ, ಹಲವು ಸುಧಾರಣಾವಾದಿ ಬರಹಗಾರರು, ಸಮಾಜ ಸುಧಾರಕರನ್ನು ನೋಡಿದ್ದೇವೆ. ಅವರೆಲ್ಲರಲ್ಲಿಯೂ ಶ್ರೇಷ್ಠವಾಗಿ ನಿಲ್ಲುವ ಕವಿ ಕುವೆಂಪು. ಅವರೊಂದಿಗೆ ಇನ್ನು ಹಲವು ಶ್ರೇಷ್ಠ ಕನ್ನಡ ಸಾಹಿತಿಗಳ ಸಾಹಿತ್ಯವನ್ನು ಇಂಗ್ಲಿಷ್​ಗೆ ಭಾಷೆಗೆ ಅನುವಾದಿಸಿದರೆ ಹೊರ ಜಗತ್ತಿಗೆ ಕನ್ನಡದ ಶ್ರೇಷ್ಠತೆ ಪರಿಚಯವಾಗಲಿದೆ ಎಂದರು. ಕಮ್ಮಟದ ನಿರ್ದೇಶಕರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಕನ್ನಡ ವಿಭಾಗದ ಪ್ರಾಧ್ಯಾಪಕಿ ಪಿ.ಸಂಗೀತಾ ನೆರವೇರಿಸಿಕೊಟ್ಟರು. ಪೊ.ವಿಶ್ವೇಶ್ವರಯ್ಯ, ಪೊ.ವೀರಭದ್ರ, ಮೋತಿರಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net