ಸಾಹಿತ್ಯದ ಮೂಲಕ ನಾಡು, ನುಡಿ ಎತ್ತಿ ಹಿಡಿಯಬೇಕು

ಕಸಾಪ ಸುದ್ದಿ
ಸಿಂಧನೂರಿನ ಪಾಟೀಲ ಮಹಿಳಾ ಕಾಲೇಜಿನಲ್ಲಿ ಬಹುಭಾಷಾ ಕವಿಗೋಷ್ಠಿ ಸರಣಿ-17 ರ ಕಾರ್ಯಕ್ರಮವನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಪ್ರಾಧ್ಯಾಪಕಿ ಫರ್ಹಾನಾಜ್ ಮಸ್ಕಿ, ಕಸಾಪ ತಾಲೂಕು ಕಸಾಪ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ವೈ.ನರೇಂದ್ರನಾಥ ಇದ್ದರು.
Published on

ಸಿಂಧನೂರು: ಭಾವನೆಗಳ ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ನಾಡು-ನುಡಿ, ಸಂಸ್ಕೃತಿಯನ್ನು ಎತ್ತಿ ಹಿಡಿಯುವಂಥ ಕೆಲಸವನ್ನು ಮಾಡಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಪಾಟೀಲ ಮಹಿಳಾ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಜಮಾತೆ ಇಸ್ಲಾಮೀ ಹಿಂದ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ ಹಾಗೂ ಸ್ವಾತಂತ್ರೃ ಮಹೋತ್ಸವ ಅಂಗವಾಗಿ ಬಹುಭಾಷಾ ಕವಿಗೋಷ್ಠಿ ಸರಣಿ-17ರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತ್ಯ, ಕವಿಗಳು, ನಾಡುನುಡಿಗಳ ಸಂಸ್ಕೃತಿಯ ಬಗ್ಗೆ ವಿನೂತನ ಕಾರ್ಯ ಚಟುವಟಿಕೆಗಳು ಮಾಡುವ ಮೂಲಕ ಅತ್ಯುತ್ತಮ ಸಂಸ್ಥೆಯಾಗಿ ಕಸಾಪ ರಾಜ್ಯದಲ್ಲಿ ಹೊರ ಹೊಮ್ಮಿದೆ. ಸಿಂಧನೂರಿನಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ವೀರಹನುಮಾನ ಹಿರಿಯ ಸಾಹಿತಿ ರಾಯಚೂರು, ವೈ ನರೇಂದ್ರನಾಥ, ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಖುರೇಶಿಬಾನು ಮುಳ್ಳೂರು, ಸೈಯದ್ ಅಬ್ದುಲ್ ಖಾದರ್ ಸುಭಾನಿ ಪತ್ರಕರ್ತ ಯಂಕಪ್ಪ ನಾಯಕ, ರಾಮಣ್ಣ ಬೇರ್ಗಿ, ಹನುಮಂತ ಭಜಂತ್ರಿ, ಅಮರೇಶ ಹಸ್ಮಕಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net