ಸಾಹಿತ್ಯ- ಕಲೆಯ ಅಧ್ಯಯನ ಮಾಡಿ

3 YLB 01
ಯಲಬುರ್ಗಾ ತಾಲೂಕಿನ ಬಂಡಿಯಲ್ಲಿ ರಾಜ್ಯೋತ್ಸವ ಹಾಗೂ ಇಮ್ಮಡಿ ಪುಲಿಕೇಶಿ ಜಯಂತಿ ಆಚರಿಸಲಾಯಿತು. ಮುಖಂಡರಾದ ಶೇಖರಯ್ಯ ಹಿರೇಮಠ, ಚನ್ನಬಸನಗೌಡ, ಸಚಿನ್ ಕೊತಬಾಳ, ಪುಟ್ಟರಾಜ, ಮಲ್ಲು ಸೂಡಿ, ರಮೇಶ ನಿಂಬನಗೌಡ್ರ, ಸಂಗಪ್ಪ ಕೊತಬಾಳ, ಎನ್.ರವಿ ಇತರರಿದ್ದರು.
Published on

ಯಲಬುರ್ಗಾ: ಯುವ ಮನಸ್ಸುಗಳಿಗೆ ಕನ್ನಡ ನಾಡು-ನುಡಿ ಬಗ್ಗೆ ಅಭಿಮಾನ ಹೆಚ್ಚಿಸುವ ಕೆಲಸವಾಗಬೇಕು ಎಂದು ಯುವ ಮುಖಂಡ ಅಮರ್ ನಿರಳ್ಳಿ ಹೇಳಿದರು. ತಾಲೂಕಿನ ಬಂಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಹಾಗೂ ಇಮ್ಮಡಿ ಪುಲಿಕೇಶಿ ಜಯಂತಿಯಲ್ಲಿ ಮಾತನಾಡಿದರು. ಕನ್ನಡ ನಾಡಿಗಾಗಿ ಶ್ರಮಿಸಿದ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಯುವ ಜನಾಂಗ ಸಾಹಿತ್ಯ, ಕಲೆ ಕುರಿತು ಅಧ್ಯಯನ ಮಾಡಬೇಕು. ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶೇಷ ಕೊಡುಗೆ ನೀಡಿದ ಪುಲಕೇಶಿ ತತ್ವಾದರ್ಶ ಅನುಕರಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net