ಸಾಹಿತ್ಯಾತ್ಮಕ ಚಟುವಟಿಕೆಗೆ ಉತ್ತೇಜನ

KUDGLI KSP
ಕಸಾಪ ತಾಲೂಕು ಅಧ್ಯಕ್ಷ ವೀರೇಶ ಅಂಗಡಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ, ಆದರ್ಶ ವಿದ್ಯಾಲಯದ ಪ್ರಾಚಾರ್ಯ ಎಚ್. ಲಕ್ಷ್ಮಣಸಿಂಗ್, ಎಸ್ಡಿಎಂಸಿ ಅಧ್ಯಕ್ಷ ಗಣೇಶ ಅಂಗಡಿ, ಜಾನಪದ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ, ಕಸಾಪ ತಾಲೂಕು ಪ್ರಧಾನ ಕಾರ್ಯದರ್ಶಿ ನಂದಿ ಬಸವರಾಜ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜು ಮಯೂರ, ಕಸಾಪ ಸದಸ್ಯರಾದ ಎಸ್.ವಿ. ಸಿದ್ದಾರಾಧ್ಯ, ಶಿದ್ದಗಂಗಮ್ಮ, ಸರ್ವಮಂಗಳ, ವೀರೇಶ ಮಾಡ್ಲಕನಹಳ್ಳಿ,ರಿಯಾಜ್ ಇದ್ದರು.
Published on

ಕೂಡ್ಲಿಗಿ: ಕನ್ನಡ ಒಂದು ಭಾಷೆಯಾಗದೇ ನಾಡಿನ ದೇವಭಾಷೆಯಾಗಿ ಮಾರ್ಪಟ್ಟಿದ್ದು,ಎಲ್ಲ ಕ್ಷೇತ್ರದಲ್ಲಿಯೂ ಕಡ್ಡಾಯವಾಗಿ ಕನ್ನಡ ಬಳಕೆಯಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧುನಿಕ, ಸಾಮಾಜಿಕ ಮತ್ತು ವಿದ್ಯುನ್ಮಾನ ಪ್ರಸರಣ ಕಾಲದಲ್ಲಿ ನಾವು ಕನ್ನಡ ಭಾಷೆಯನ್ನು ಹೆಚ್ಚು ಬೆಳೆಸಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ 221 ದತ್ತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನ ಸಾಮಾನ್ಯರಿಗೂ ಸಾಹಿತ್ಯದ ಅಭಿರುಚಿ ಪಸರಿಸುತ್ತಿದೆ.

ತಾಲೂಕಿನ ಪ್ರತಿ ಶಾಲೆ, ಕಾಲೇಜುಗಳಲ್ಲಿ ಸ್ವರಚಿತ ಕವನ, ಗಾಯನ ಸ್ಪರ್ಧೆ, ಸಾಹಿತ್ಯಾತ್ಮಕ ಚಟುವಟಿಕೆ ಹಮ್ಮಿಕೊಳ್ಳಲಾಗುವುದು. ಜನರಿಗೆ ಕನ್ನಡ ಸಾಹಿತ್ಯ ಹಾಗೂ ಸಂಸೃತಿಯ ಪರಿಚಯ ಮಾಡಿಸಿ ಮುಂದಿನ ಯುವ ಪೀಳಿಗೆಗೆ ಪ್ರೇರೇಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಶಿಕ್ಷಕ ಎನ್.ಜೆ. ಮಂಜುನಾಥ ಮಾತನಾಡಿ, ಉತ್ತಮ ಶಿಕ್ಷಕ ದಕ್ಷ ಅಧಿಕಾರಿಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಗುರು, ಶಿಷ್ಯ ಮತ್ತು ಪೋಷಕರ ಸಮನ್ವಯತೆಯಿಂದ ದೋಷ ರಹಿತ ಸಮಾಜ ಕಟ್ಟಲು ಮುಂದಾಗಬೇಕಾಗುತ್ತದೆ ಎಂದರು.

ವಚನಗಳ ಸೃಷ್ಟಿ

ಶಿಕ್ಷಕ ಎ.ಎರ್ರಿಸ್ವಾಮಿ ಮಾತನಾಡಿ, ಶರಣರು ಪ್ರತಿ ದಿನವೂ ಕಾಯಕ ಮಾಡುವ ಮೂಲಕ ದೇವರ ಮೊರೆ ಹೋಗುತ್ತಿದ್ದರು. ಅವರು ತಮ್ಮ ಅಂಕಿತ ನಾಮಗಳಿಂದ ಮಾತನಾಡುತ್ತಾ ಲೋಕದ ಡೊಂಕುಗಳನ್ನು ತಿದ್ದಿ ಸಾಹಿತ್ಯ ರಚಿಸಿದ್ದಾರೆ. ಈ ಹಿಂದೆ ಸಾಹಿತ್ಯ ಎಂಬುದು ಅರಸರ ಆಸ್ಥಾನಗಳಿಗೆ ಮಾತ್ರ ಸೀಮಿತವಾಗಿತ್ತು. 12ನೇ ಶತಮಾನದಲ್ಲಿ ಸಾಹಿತ್ಯ ಎಂಬುದು ಅರಮನೆಯಿಂದ ಗುರುಮನೆಗೆ, ಗುರು ಮನೆಯಿಂದ, ಜನ ಸಾಮಾನ್ಯರ ಮನೆ ಮನಗಳಿಗೆ ಬಂದು ಮುಟ್ಟಿತ್ತು. ಇದರಿಂದ 27 ಸಾವಿರಕ್ಕೂ ಹೆಚ್ಚು ವಚನಗಳು ಸೃಷ್ಟಿಯಾದವು. ಶರಣರು ಜನ ಸಾಮಾನ್ಯರ ಭಾಷೆಯಲ್ಲಿ ವಚನಗಳನ್ನು ಬರೆದು ಅವರನ್ನು ಅಧ್ಯಾತ್ಮದತ್ತ ಕೊಂಡ್ಯೊದರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net