

ಗೋಕಾಕ: ಬರವಣಿಗೆಗಿಂತ ಹಿರಿಯರ ಸಾಹಿತ್ಯ ಹಾಗೂ ಶಿಣ ಪದ್ಧತಿಯ ಚಿಂತನ&ಮಂಥನದ ಅವಶ್ಯಕತೆ ಹೆಚ್ಚಿದೆ ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ನಗರದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಗೋಕಾವಿ ಗೆಳೆಯರ ಬಳಗ ಮತ್ತು ರೆಡ್ಡಿ ಪರಿವಾರದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಹಿತಿ ವಿದ್ಯಾ ರೆಡ್ಡಿ ಅವರ ಪುಸ್ತಕಗಳ ಲೋಕಾರ್ಪಣೆ ಸಮಾರಂಭದ ಅಧ್ಯತೆ ವಹಿಸಿ ಮಾತನಾಡಿದರು.
ಬಳಗದ ಸಂಚಾಲಕ ಜಯಾನಂದ ಮಾದರ ಪ್ರಾಸ್ತಾವಿಕ ಮಾತನಾಡಿ, ನಮ್ಮ ಬಳಗದ ವತಿಯಿಂದ ಹೊಸ ಬರಹಗಾರರಿಗೆ ವೇದಿಕೆ ಒದಗಿಸಿ ಗೌರವಿಸುವ ಕಾರ್ಯ ಆಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಶಂಕರ ಕ್ಯಾಸ್ತಿ, ರಜನಿ ಜೀರಗ್ಯಾಳ, ಡಾ.ಸಾವಿತ್ರಿ ಕೆಮಲಾಪೂರ, ಪ್ರಿಯಂವದಾ ಹುಲಗಬಾಳಿ, ರಮೇಶ ಮಿರ್ಜಿ, ಮಾರುತಿ ದೇಸಾಯಿ ಪುಸ್ತಕಗಳ ಕುರಿತು ಮಾತನಾಡಿದರು. ರಾಮಚಂದ್ರ ಕಾಕಡೆ, ಡಾ.ಅರುಣ ಸವತಿಕಾಯಿ, ನಿರ್ಮಿತಾ ರೆಡ್ಡಿ ಇತರರಿದ್ದರು.