ಜ.21ರಂದು ಲಿಟರರಿ ಫೆಸ್ಟ್-2024 ಕಾರ್ಯಕ್ರಮ

book
Published on

ಮೈಸೂರು: ಮೈಸೂರು ಲಿಟರರಿ ಅಸೋಸಿಯೇಷನ್ ವತಿಯಿಂದ ಜ.21ರಂದು ಬೆಳಗ್ಗೆ 10.30ರಿಂದ ಸಂಜೆ 4ರವರೆಗೆ ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಲಿಟರರಿ ಫೆಸ್ಟ್-2024 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಕೆ.ಸಿ.ಬೆಳ್ಳಿಯಪ್ಪ ತಿಳಿಸಿದರು.

ಹಿರಿಯ ಸಾಹಿತಿ ಡಾ.ಬಿ.ನಂಜಪ್ಪ ಚಿನ್ನಪ್ಪ ಉದ್ಘಾಟಿಸುವರು. ಸಮಾಜ ಶಾಸ್ತ್ರಜ್ಞೆ ಪ್ರೊ.ಆರ್. ಇಂದಿರಾ ಅವರು ಪಶ್ಚಿಮಘಟ್ಟದಲ್ಲಿ ಇಕೊ ಟೂರಿಸಂ, ಯಾರಿಗೆ ಲಾಭ, ಯಾರಿಗೆ ನಷ್ಟ ವಿಷಯ ಕುರಿತು, ವಿಮರ್ಶಕ ಪ್ರೊ.ಎನ್.ಮನು ಚಕ್ರವರ್ತಿ ಅವರು ರೀಡಿಂಗ್ ಲಿಟರೇಚರ್ ಎನ್‌ಕೌಂಟರಿಂಗ್ ದಿ ಸ್ಪಿರಿಟ್ ಆಫ್ ಟೈಮ್ಸ್ ಕುರಿತು ಮಾತನಾಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ರೆಜಿನಾಲ್ಡ್ ವೆಸ್ಲಿ, ಪ್ರೊ.ಬಿ.ಎನ್.ಬಾಲಾಜಿ, ಪ್ರೊ. ನಿರ್ಮಲಾ ಚಂದ್ರಪ್ರಕಾಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net