ಕನ್ನಡ ಸಾಹಿತ್ಯಕ್ಕೆ ಡಾ.ವಿಸಾಜಿ ಕೊಡುಗೆ ಶ್ರೇಷ್ಠ

23blk2
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗುರುಬಸವ ಪಟ್ಟದ್ದೇವರು, ಡಾ.ವೈಜಿನಾಥ ಭಂಡೆ, ನಾಗಭೂಷಣ ಮಾಮಡಿ, ಡಾ.ವಿಕ್ರಮ ವಿಸಾಜಿ, ಬಸವರಾಜ ಮರೆ, ಬಂಡೆಪ್ಪ ಶರಣರು ಇದ್ದರು.
Published on

ಭಾಲ್ಕಿ: ಗಡಿ ಭಾಗದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿ ಅವರ ಕೊಡುಗೆ ಶ್ರೇಷ್ಠವಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಬಣ್ಣಿಸಿದರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ಭಾನುವಾರ ಆಯೋಜಿಸಿದ್ದ ೩೦೩ನೇ ಮಾಸಿಕ ಶರಣ ಸಂಗಮ ಮತ್ತು ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿ ನುಡಿನಮನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಮತ್ತು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಜತೆಗೂಡಿ ಕನ್ನಡದ ಕಾರ್ಯಗಳನ್ನು ಮಾಡಿದ್ದರು. ಶ್ರೀಮಠದ ಎಲ್ಲ ಕಾರ್ಯಗಳಲ್ಲಿ ಡಾ.ವಿಸಾಜಿ ಅವರ ಸೇವೆ ಇರುತ್ತಿತ್ತು. ಅವರು ಅಧ್ಯಾಪಕರಾಗಿ, ಕನ್ನಡದ ವಾತಾವರಣ ನಿರ್ಮಾಣ ಮಾಡಿದ್ದರು. ಡಾ.ಚನ್ನಬಸವ ಪಟ್ಟದ್ದೇವರ ಕುರಿತು ಡಾ.ವಿಸಾಜಿ ಮೊದಲ ಸಾಹಿತ್ಯ ಕೃತಿ ಹೊರ ತಂದಿದ್ದರು. ಅವರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಜತೆಗೆ ವಚನ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅಪಾರ ಶಿಷ್ಯ ಬಳಗ ಹೊಂದಿರುವ ಅವರು, ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ. ಅವರ ಪುತ್ರ ಡಾ. ವಿಕ್ರಮ ವಿಸಾಜಿ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೃಷಿ ಮಾಡುತ್ತಿರುವುದು ಹೆಮ್ಮೆ ತರಿಸಿದೆ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಗುರುಮಠಕಲ್ ಶ್ರೀಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಹಿರೇಮಠ ಸಂಸ್ಥಾನ ನಿರಂತರವಾಗಿ ಶರಣ ಸಂಸ್ಕೃತಿ ಪಸರಿಸುವ ಕಾರ್ಯ ಮಾಡುತ್ತಿರುವುದು ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕರಾದ ಡಾ.ವೈಜಿನಾಥ ಭಂಡೆ, ಡಾ.ಚಂದ್ರಶೇಖರ ಬಿರಾದಾರ್, ಡಾ.ಭೀಮಾಶಂಕರ ಬಿರಾದಾರ್, ಡಾ.ವಿಕ್ರಮ ವಿಸಾಜಿ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಬಸವ ಗುರುವಿನ ಪೂಜೆ ನೆರವೇರಿಸಿದರು. ಎಂ.ಬಂಡೆಪ್ಪ ಶರಣರು ಧರ್ಮಗ್ರಂಥ ಪಠಣ ಮಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶಂಭುಲಿAಗ ಕಾಮಣ್ಣ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಶರಣಯ್ಯ ಮಠಪತಿ, ವಿಶ್ವನಾಥಪ್ಪ ಬಿರಾದಾರ್, ಬಸವರಾಜ ಮರೆ, ಓಂಪ್ರಕಾಶ ರೊಟ್ಟೆ, ಚನ್ನಬಸವ ವಿಸಾಜಿ ಇತರರಿದ್ದರು. ವೀರಣ್ಣ ಕುಂಬಾರ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು. ರಾಜು ಜುಬರೆ ವಂದಿಸಿದರು.

ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿ ಸುಮಾರು ೩೦ಕ್ಕೂ ಅಧಿಕ ಕೃತಿಗಳನ್ನು ರಚಿಸಿ ಗಡಿಭಾಗದ ಕನ್ನಡ ಸಾಹಿತ್ಯ ಲೋಕಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ.
| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net