ಸಾಹಿತ್ಯ ಸಮ್ಮೇಳನ; ಸರ್ವಾಧ್ಯಕ್ಷ ಹಳೇಕೋಟೆ ರಮೇಶ್‌ಗೆ ಗೌರವ

17 ckm 2
ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಹಳೆಕೋಟೆ ರಮೇಶ್ ಅವರನ್ನು ಅವರ ನಿವಾಸದಲ್ಲಿಯೇ ಸಿರಿಗನ್ನಡ ವೇದಿಕೆಯಿಂದ ಗೌರವಿಸಲಾಯಿತು. ಕುಂದೂರು ಅಶೋಕ್, ಎಂ.ಆರ್.ಪ್ರಕಾಶ್, ಎಂ.ಸಿ.ಶಿವಾನಂದಸ್ವಾಮಿ, ಪೂರ್ಣೇಶ್ ಮೂರ್ತಿ, ಚಂದ್ರಯ್ಯ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಹಳೇಕೋಟೆ ರಮೇಶ್ ಅವರು ಸುಮಾರು 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವುದಲ್ಲದೇ ಪ್ರಪಂಚದ ವಿವಿಧ ದೇಶಗಳಿಗೆ ಪ್ರವಾಸ ಕೈಗೊಂಡು ಎಲ್ಲೆಡೆಯೂ ಕನ್ನಡದ ಕಂಪನ್ನು ಹಬ್ಬಿಸಿದ್ದಾರೆ ಎಂದು ಕಸಾಪ ಮಾಜಿ ಅಧ್ಯಕ್ಷ ಕುಂದೂರು ಅಶೋಕ್ ತಿಳಿಸಿದರು.

ಮೂಡಿಗೆರೆಯಲ್ಲಿ ಮಾ.29 ಮತ್ತು 30ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ 19ನೇ ಜಿಲ್ಲಾ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಹಳೇಕೋಟೆ ರಮೇಶ್ ಅವರನ್ನು ಅವರ ನಿವಾಸದಲ್ಲಿ ಜಿಲ್ಲಾ ಸಿರಿಗನ್ನಡ ವೇದಿಕೆಯಿಂದ ಗೌರವಿಸಿ ಮಾತನಾಡಿದ ಅವರು, ಜಿಲ್ಲಾ ಸಮ್ಮೇಳನಾಧ್ಯಕ್ಷರನ್ನಾಗಿ ಹಳೆಕೋಟೆ ರಮೇಶ್ ಅವರನ್ನು ಆಯ್ಕೆ ಮಾಡುವ ಮೂಲಕ ಕನ್ನಡದ ಮನಸುಗಳನ್ನು ಗೌರವಿಸುವ ಕೆಲಸ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್, ಗೌರವಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಮೂಡಿಗೆರೆ ತಾಲೂಕು ಅಧ್ಯಕ್ಷ ಪೂರ್ಣೇಶ್ ಮೂರ್ತಿ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಚಂದ್ರಯ್ಯ, ಬಾಳೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ಸಂಚಾಲಕರಾದ ಮಹೇಂದ್ರ ಕುಮಾರ್, ಡಾ.ಹೇಮಂತ್ ಕುಮಾರ್, ಹಿರಿಯರಾದ ಹಾಲಪ್ಪ ಗೌಡ, ದಾರದಹಳ್ಳಿ ಜಯಣ್ಣ , ಮೋಯಿದ್ದಿನ್ ಬಿಳಗುಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net