ಡಿ.2ರಂದು ಇವಣಗಿಯಲ್ಲಿ ಸಾಹಿತ್ಯ ಸಮ್ಮೇಳನ

Literary conference in Ivanagi on December 2nd
ಬಸವನಬಾಗೇವಾಡಿಯ ಕಸಾಪ ಪದಾಧಿಕಾರಿಗಳ ಸಭೆ ಜರುಗಿತು. ಕಸಾಪ ತಾಲೂಕಾಧ್ಯ ಶಿವಾನಂದ ಡೋಣೂರ, ಗೌರವ ಕಾರ್ಯದರ್ಶಿ ಯಮನಪ್ಪ ಮಿಣಜಗಿ, ಸ.ಕಾ. ಕೊಟ್ರೇಶ್​ ಹೆಗಡ್ಯಾಳ, ಕೊಶಾಧ್ಯ ಬಸವರಾಜ ಮೇಟಿ ಇದ್ದರು.
Published on

ಬಸವನಬಾಗೇವಾಡಿ: ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.2 ರಂದು ಆಯೋಜಿಸಲಾಗುವುದು ಎಂದು ಕಸಾಪ ತಾಲೂಕಾಧ್ಯ ಶಿವಾನಂದ ಡೋಣೂರ ಹೇಳಿದರು.

ಪಟ್ಟಣದ ಕಸಾಪಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮೊದಲಿಗೆ ನ.13 ರಂದು ನಡೆಸಲು ನಿರ್ಧಾರ ಮಾಡಲಾಗಿತ್ತು. ಆದರೆ ಉಪಚುನಾವಣೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಈಗ ಡಿ.2 ರಂದು ಇವಣಗಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.

ಗೌರವ ಕಾರ್ಯದರ್ಶಿ ಯಮನಪ್ಪ ಮಿಣಜಗಿ, ಸ.ಕಾ. ಕೊಟ್ರೇಶ್​ ಹೆಗಡ್ಯಾಳ, ಕೊಶಾಧ್ಯ ಬಸವರಾಜ ಮೇಟಿ, ಅ.ಸಂ.ಪ್ರತಿನಿಧಿ ಎಂ.ಎನ್​ ಅಂಗಡಗೇರಿ, ರವಿ ರಾಠೋಡ, ಶಿವಪುತ್ರ ಅಂಕದ, ಬಸವರಾಜ ಪಟ್ಟಣಶೆಟ್ಟಿ, ಎಸ್​.ಎಲ್​.ಓಂಕಾರ, ಬಿ.ವ್ಹಿ.ಚಕ್ರಮನಿ, ಬಸವರಾಜ ಚಿಂಚೊಳ್ಳಿ, ಮಾಧ್ಯಮ ಪ್ರತಿನಿಧಿ ನಾಗೇಶ ನಾಗೂರ, ಮಹಾದೇವಿ ಬಿರಾದಾರ, ಶಾಂತಾ ಚೌರಿ ಇದ್ದರು.

ಸರ್ವಾಧ್ಯ ಆಯ್ಕೆಗೆ ಸಮಿತಿ ರಚನೆ: ಸಮ್ಮೇಳನದ ಲಾಂಛನ, ಆಮಂತ್ರಣ ಪತ್ರಿಕೆ ಹಾಗೂ ಸರ್ವಾಧ್ಯರ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಸಮ್ಮೇಳನದ ಸರ್ವಾಧ್ಯ ಸ್ಥಾನಕ್ಕೆ ನವೆಂಬರ 22ರ ವರೆಗೆ ತಾಲೂಕ ಅಧ್ಯರಲ್ಲಿ ಅರ್ಜಿ ನೀಡಬಹುದು ಎಂದು ಕಸಾಪ ಜಿಲ್ಲಾಧ್ಯ ಹಾಸಿಂಪೀರ ವಾಲಿಕಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net