

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಥಾಬಿಂದು ಪ್ರಕಾಶನ ಮಂಗಳೂರು ಸಂಯುಕ್ತಾಶ್ರಯದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ‘ಸಾಹಿತ್ಯ ಸಂಭ್ರಮ-2024’ ಕಾರ್ಯಕ್ರಮ ನೆರವೇರಿತು.
ಇದೇ ವೇಳೆ ಡಾ.ಟಿ.ತ್ಯಾಗರಾಜು ಮೈಸೂರು ಅವರ ‘ಮನದ ಮಾತು’, ಪುಷ್ಪಾ ನಾಗತಿಹಳ್ಳಿ ಅವರ ‘ಅನುಗತ’ ಮತ್ತು ‘ಧರೆಯಂಚಿನ ಮರ’, ಶೋಭಿತಾ ಮೈಸೂರು ಅವರ ‘ಸಂಜೆಯ ಸೂರ್ಯ’, ಲತಾ ಕೆ.ಎಸ್.ಹೆಗಡೆ ಅವರ ‘ಕನ್ನಡ ತರುಲತೆ’ ಮತ್ತು ‘ಗುಬ್ಬಿಯ ಗೂಡು’, ಹಾ.ಮ.ಸತೀಶ್ ಬೆಂಗಳೂರು ಅವರ ‘ನುಡಿಹಾರ’, ‘ಜೀನುಗುವ ಸೋನೆ ಮಳೆ’ ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು.