

ಗಜೇಂದ್ರಗಡ: ಗ್ರಾ.ಪಂ. ಮಟ್ಟದಲ್ಲಿ ಅನಕ್ಷರಸ್ಥರಿಗೆ ಕನಿಷ್ಠ ಸರಳ ಓದು ಬರಹ, ಸಹಿ, ಲೆಕ್ಕಾಚಾರ ಕಲಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಕ್ಷರತಾ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಸಾಕ್ಷರತಾ ನೋಡಲ್ ಅಧಿಕಾರಿ ಶಿವಕುಮಾರ ಕುರಿ ಹೇಳಿದರು.
ತಾಲೂಕಿನ ಗೋಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಯಂ ಸೇವಕ ಭೋಧಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಗೋಗೇರಿ ಹಾಗೂ ರಾಂಪೂರ ಗ್ರಾ.ಪಂ ವ್ಯಾಪ್ತಿಯಲ್ಲಿ ಅನಕ್ಷರಸ್ಥರನ್ನು ಗುರುತಿಸಲಾಗಿದ್ದು ಅವರನ್ನು ಅಕ್ಷರಸ್ಥರನ್ನಾಗಿಸುವ ಯೋಜನೆ ಇದಾಗಿದೆ’ ಎಂದರು.
ಸಿಆರ್‌ಪಿ ಪ್ರಕಾಶ ಅಂಬೋರೆ, ಕಳಕಪ್ಪ ಕೊಡತಗೇರಿ, ಎಚ್.ಕೆ. ರಾಮಜಿ, ಸಂಗಣ್ಣ ಮೂಲಿಮನಿ, ಮಲ್ಲಿಕಾರ್ಜುನ ಗಾರಗಿ ಪಿ.ಡಿ. ಮಂಗಳೂರು, ಅಶೋಕ ಹಾದಿ, ಸಂಗಪ್ಪ ಮೂಲಿಮನಿ, ಬಿ.ವಿ. ಅಂಗಡಿ, ಡಿ.ಎನ್. ರಾವಳೆ, ಭಾಗ್ಯಶ್ರೀ ಅಂಬೋರೆ ಇತರರು ಇದ್ದರು.