

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ನಿಮಿತ್ತ ನೂರಾರು ಮಕ್ಕಳಿಗೆ ತಂದೆ-ತಾಯಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸ ನೆರವೇರಿಸಲಾಯಿತು.
ಪ್ರಧಾನ ಅರ್ಚಕ ಸಿದ್ದಲಿಂಗಯ್ಯಶಾಸ್ತ್ರಿಗಳು ಹಿರೇಮಠ ಮತ್ತು ಶಿವಾನಂದ ಶಾಸ್ತ್ರಿಗಳು ಮಾತನಾಡಿ, ಷೋಡಶ ಸಂಸ್ಕಾರಗಳಲ್ಲಿ ಅಕ್ಷರಾಭ್ಯಾಸವೂ ಒಂದು. ಅಕ್ಷರ ಎಂಬ ಶಬ್ಧಕ್ಕೆ ನಾಶವಿಲ್ಲದಿರುವುದು ಎಂದರ್ಥವಿದೆ. ಹಿಂದು ಧರ್ಮದ 16 ಸಂಸ್ಕೃತಿಗಳ ಪೈಕಿ ಅಕ್ಷರಾಭ್ಯಾಸ ಅತ್ಯಂತ ಶ್ರೇಷ್ಠವಾದುದು ಎಂದರು.
ಅಕ್ಷರಾಭ್ಯಾಸ ಮಹತ್ವದ ಸಂಸ್ಕಾರವಾಗಿದ್ದು, ಪಾಲಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಅಕ್ಷರ ಕಲಿಸಿದರೆ ಅವರೇ ದೊಡ್ಡ ಆಸ್ತಿಯಾಗುತ್ತಾರೆ. ಮಕ್ಕಳನ್ನು ಉತ್ತಮ ಸಮಾಜದ ಶ್ರೇಷ್ಠ ನಾಗರಿಕರನ್ನಾಗಿ ಮಾಡಬೇಕು ಎಂದರು.
ಅಕ್ಷತೆ ತುಂಬಿರುವ ತಟ್ಟೆಯಲ್ಲಿ ಮಕ್ಕಳ ಕೈಹಿಡಿದು ಓಂ ಪದ ಬರೆಸುವ ಮೂಲಕ ಅಕ್ಷರಾಭ್ಯಾಸಕ್ಕೆ ನಾಂದಿ ಹಾಡಲಾಯಿತು. ಮಂದಿರದ ಕಮಿಟಿಯವರು ಗುರುಪೂರ್ಣಿಮೆಯ ದಿನ ಉಚಿತವಾಗಿ ಅಕ್ಷರಾಭ್ಯಾಸದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.
ಗುರುಸಿದ್ದಯ್ಯಶಾಸ್ತ್ರೀಗಳು, ಆನಂದಸ್ವಾಮಿ ಶಾಸ್ತ್ರೀಗಳು, ಪಸನ್ನ ಶಾಸ್ತ್ರೀಗಳು ಸೇರಿದಂತೆ ಇತರರಿದ್ದರು. ಅಕ್ಷರಾಭ್ಯಾಸದ ನಿಮಿತ್ತ ಬೃಹಸೃತಿ, ಮೃತ್ಯುಂಜಯ, ಗಣಹೋಮಗಳನ್ನು ನೆರವೇರಿಸಲಾಯಿತು. ಸಾಯಿಬಾಬಾರವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.