ಜೈಂಟ್ಸ್ ಶಾಲೆ ಮಕ್ಕಳಿಗೆ ಅಕ್ಷರಾಭ್ಯಾಸ

h10-giants school 2
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಜೈಂಟ್ಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಂಗಳವಾರ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ವಾಗತ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮ ಏರ್ಪಾಟಾಗಿತ್ತು.

ಸಂಸ್ಥೆ ಅಧ್ಯಕ್ಷ ಪರಶುರಾಮ ಊಟವಾಲೆ ಅವರ ನೇತೃತ್ವದಲ್ಲಿ ಜ್ಞಾನ ದೇವತೆ ಸರಸ್ವತಿ ಆಶೀರ್ವಾದದೊಂದಿಗೆ ವಿದ್ಯೆ ಆರಂಭಿಸುವ ಧಾರ್ಮಿಕ ಪ್ರಕ್ರಿಯೆ ನಡೆಯಿತು.

ಮಕ್ಕಳಿಗೆ ಆರತಿ ಮಾಡಿ ಹೂವು ವಿತರಿಸಲಾಯಿತು. ಆಚಾರ್ಯರು ಹೇಳಿದ ರೀತಿ ಮಕ್ಕಳಿಗೆ ವಿದ್ಯಾಭ್ಯಾಸ ಪ್ರಾರಂಭಿಸಲಾಯಿತು.

ಸಂಸ್ಥೆ ವತಿಯಿಂದ ಮಕ್ಕಳಿಗೆ ಸ್ಲೇಟ್ ಹಾಗೂ ಬಳಪ ವಿತರಿಸಲಾಯಿತು.

ಕಾರ್ಯನಿರ್ವಾಹಕ ಅಧ್ಯಕ್ಷ ಎನ್.ಆರ್. ರವಿ, ಕಾರ್ಯದರ್ಶಿ ವಿಜಯ ಕುಲಕರ್ಣಿ, ಮಾಜಿ ಅಧ್ಯಕ್ಷ ಜಿ.ಎಸ್. ನಾಯ್ಕ, ಸದಸ್ಯರಾದ ಅಶೋಕ ವಕ್ಕುಂದ, ವಸಂತ ನಾಯ್ಕ, ಆಡಳಿತಾಧಿಕಾರಿ ಉಮಾ ಸಿ. ಪಾಟೀಲ, ಮುಖ್ಯೋಪಾಧ್ಯಾಯ ಬಸವರಾಜ ಚಟ್ನಿ, ಪಾಲಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net