ಪ್ರವಚನ ಆಲಿಸಿದರೆ ನೆಮ್ಮದಿ ಸಾಧ್ಯ

17RAIBAG2
Published on

ರಾಯಬಾಗ: ಆಧ್ಯಾತ್ಮಿಕ ಪ್ರವಚನ ಆಲಿಸುವುದರಿಂದ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹುಕ್ಕೇರಿ ಹಿರೇಮಠದ ರಾಯಬಾಗ ಶಾಖಾ ಮಠದ ೯ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಮಾನಂದವಾಡಿ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಕಬ್ಬೂರ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪಟ್ಟಣದ ಹನುಮಾನ ಮಂದಿರದಿಂದ ಶ್ರೀಮಠದವರೆಗೆ ಕುಂಭಮೇಳ ಮತ್ತು ಜಗದ್ಗುರು ರೇಣುಕಾಚಾರ್ಯರ ಬೆಳ್ಳಿ ಮೂರ್ತಿ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ಬಡಕುಂದ್ರಿಯ ಹೊಳೆಮ್ಮ ದೇವಸ್ಥಾನ ಅರ್ಚಕರಾದ ಹೊಳೆಪ್ಪ ಪೂಜೇರಿ, ಸಂಗೀತಾ ಪೂಜೇರಿ ದಂಪತಿಗೆ ಗುರುಶಾಂತೇಶ್ವರ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯರನಾಳದ ಗುರು ಬ್ರಹ್ಮಾನಂದ ಅಜ್ಜ, ಸೌಂದತ್ತಿಯ ಶಿವಶಂಕರ ಸ್ವಾಮೀಜಿ, ಅನಂತಾನಂದ ಸ್ವಾಮೀಜಿ, ಕೃಪಾನಂದ ಸ್ವಾಮೀಜಿ, ರೇಣುಕಾ ಗರುಡೇಶ್ವರ ಸ್ವಾಮೀಜಿ, ಮಹೇಶ ಭಾತೆ, ಸದಾಶಿವ ಘೋರ್ಪಡೆ, ರಾಜಶೇಖರ ಖನದಾಳೆ, ಸುಶೀಲಾ ಐಹೊಳೆ, ಅರುಣ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ, ಪೃಥ್ವಿರಾಜ ಜಾಧವ, ಮಹಾದೇವ ಬೋರಗಾಂವೆ, ಜಯದೀಪ ದೇಸಾಯಿ, ಅಪ್ಪಾಸಾಹೇಬ ಮೈಶಾಳೆ, ಬಸವರಾಜ ಡೊಣವಾಡೆ, ಪಿ.ಎ. ನಾಯಿಕ, ಸದಾನಂದ ಹಳಿಂಗಳಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net