

ಲಕ್ಷ್ಮೇಶ್ವರ: ತಂತ್ರಜ್ಞಾನದ ಜಮಾನಾದಲ್ಲಿ ಮಕ್ಕಳಿಗೆ ಬಾಲ್ಯದಲ್ಲಿಯೇ ಪಠ್ಯಶಿಕ್ಷಣದ ಜತೆಗೆ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯಗಳ ಶಿಕ್ಷಣ ನೀಡಬೇಕಾಗಿದೆ ಎಂದು ಹತ್ತಿಮತ್ತೂರಿನ ವಿರಕ್ತಮಠದ ನಿಜಗುಣ ಶಿವಯೋಗಿಗಳು ಹೇಳಿದರು.
ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಶ್ರಾವಣಮಾಸದ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವೈಯಕ್ತಿಕ ಹಿತಾಸಕ್ತಿಗಾಗಿ ಬಾಳಿದವರು ಬಹಳ. ಆದರೆ ಜೀವನದುದ್ದಕ್ಕೂ ಧರ್ಮ, ಪರಂಪರೆ, ಸಂಸ್ಕೃತಿ, ಸಮನ್ವಯತೆ ಹೀಗೆ ಲೋಕಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ದಾರಿದೀಪವಾದವರು ಲಿಂ.ಶ್ರೀ ಸಿದ್ಧಾರೂಡ ಶರಣರು. ನಿತ್ಯದ ಜಂಜಾಟಗಳ ನಡುವೆ ಶ್ರಾವಣಮಾಸದಲ್ಲಿ ಮನಸಿನ ಶಾಂತಿ, ನೆಮ್ಮದಿಗಾಗಿ ಪುಣ್ಯಪುರುಷರ ಪುರಾಣ ಪುಣ್ಯಕಥೆಗಳು ಅವಶ್ಯ ಎಂದರು.
ಪ್ರಭುಗೌಡ ಯಕ್ಕಿಕೊಪ್ಪ ಪುರಾಣ ಪ್ರವಚನ ನಡೆಸಿಕೊಟ್ಟರು. ಜಯಲಕ್ಷ್ಮೀ ಗಡ್ಡದೇವರಮಠ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಜಯಲಕ್ಷ್ಮೀ ಮಹಾಂತಶೆಟ್ಟರ, ರೋಹಿಣಿಬಾಯಿ ಬಹಾದ್ದೂರ್ ದೇಸಾಯಿ, ಲಲಿತಕ್ಕ ಕೆರಿಮನಿ, ಇಂದುಮತಿ ಜಕ್ಕನಗೌಡ್ರ, ಜೆ.ಡಿ. ಲಮಾಣಿ, ಎಂ. ಸಿದ್ಧಲಿಂಗಯ್ಯ, ವಿ.ಬಿ. ಬಿಳಿಎಲಿ, ಸ್ವಾತಿ ಪೈ, ಜೆ. ಡಿಲಮಾಣಿ, ಸಂಜೀವರೆಡ್ಡಿ ಹೊಸಮನಿ, ರೂಪಾ ನವಲೆ, ಸಾವಿತ್ರಿ ನಲವಡಿ, ಫಕೀರೇಶ ಚಕಾರದ ಇದ್ದರು. ಜ್ಯೋತಿ ಅರಳಿಕಟ್ಟಿ ನಿರೂಪಿಸಿದರು.