ಶರಣರ ಸಂದೇಶ ಶ್ರವಣ ಮಾಡಿ

New pobus club new
Published on

ಹುಬ್ಬಳ್ಳಿ : ಪ್ರತಿಯೊಬ್ಬರೂ ಶರಣರ ಸಂದೇಶಗಳನ್ನು ಶ್ರವಣ ಮಾಡಬೇಕು ಮತ್ತು ಸ್ಮರಣೆ ಮಾಡಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ನಿವೃತ್ತ ಶಿಕ್ಷಕ, ಆಧ್ಯಾತ್ಮಿಕ ಚಿಂತಕ ಸಿ.ಬಿ. ಮರಿಗೌಡರ ಹೇಳಿದರು.

ಇಲ್ಲಿಮ ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಪ್ರೋಬಸ್ ಕ್ಲಬ್ ಉಣಕಲ್ಲದ ಅಕ್ಟೋಬರ್ ಮಾಸಿಕ ಸಭೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಣಕಲ್ಲ ಶ್ರೀ ಸಿದ್ದಪ್ಪಜ್ಜನವರ ಲೀಲೆಗಳು ಕುರಿತು ಮಾತನಾಡಿದರು.

ಮಹಾತ್ಮರ ಅನುಗ್ರಹದಿಂದ ಸಂಕಲ್ಪಗಳು ಸಿದ್ಧಿಯಾಗುತ್ತವೆ ಎಂದ ಅವರು, ಉಣಕಲ್ಲ ಶ್ರೀ ಸಿದ್ದಪ್ಪಜ್ಜನವರು ತಮ್ಮ 12ನೇ ವಯಸ್ಸಿನಿಂದಲೇ ಲೀಲೆಗಳನ್ನು ಮಾಡುತ್ತ ಬಂದಿರುವುದನ್ನು ವಿವರಿಸಿದರು.

16 ಊರುಗಳಲ್ಲಿ ಉಣಕಲ್ಲ ಶ್ರೀ ಸಿದ್ದಪ್ಪಜ್ಜನವರ ಮಠಗಳಿವೆ. ಭಕ್ತರು ನಿರಂತರವಾಗಿ ಅವರನ್ನು ಸ್ಮರಿಸುತ್ತಾರೆ. ಹಠಯೋಗಿ ಆಗಿದ್ದ ಶ್ರೀಗಳು, ಹಲವಾರು ಜನರ ಬದುಕು ಬೆಳಗಿಸಿದ್ದಾರೆ ಎಂದರು. ಕ್ಲಬ್ ಅಧ್ಯಕ್ಷ ಡಾ. ಎಂ.ಬಿ. ಸಜ್ಜನರ ಅಧ್ಯಕ್ಷತೆ ವಹಿಸಿದ್ದರು. ವಿ.ಜಿ. ವಿಶ್ವಬ್ರಾಹ್ಮಣ ಮತ್ತು ಎಸ್.ಎಸ್. ಕರಡಿ ಪ್ರಾರ್ಥಿಸಿದರು. ಎಸ್.ಬಿ. ಅಂಕಲಿ ಸ್ವಾಗತಿಸಿದರು. ಡಾ. ಬಿ.ಎಸ್. ಮಾಳವಾಡ ನಿರೂಪಿಸಿದರು. ಡಾ. ಬಿ.ವಿ. ಹಳೇಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net