ಭಾಗವತ ಪುರಾಣ ಆಲಿಸಿ

Listen to Bhagavata Purana
ಇಳಕಲ್ಲ ನಗರದಲ್ಲಿ ಭಗವದ್ಗೀತೆಯ ಭವ್ಯ ಮೆರವಣಿಗೆ ನಡೆಯಿತು. ಘನಶ್ಯಾಮ ದರಕ, ಬಾಲಕೃಷ್ಣ ದರಕ, ರಂಗಲಾಲ ದರಕ, ಕಮಲಕಿಶೋರ ದರಕ, ರಾಜಗೋಪಾಲ್ ದರಕ ಇತರರಿದ್ದರು.
Published on

ಇಳಕಲ್ಲ(ಗ್ರಾ): ನಗರದ ಮಹೇಶ್ವರಿ ಭವನದಲ್ಲಿ ಒಂದು ವಾರದ ಭಾಗವತ ಪುರಾಣಕ್ಕೆ ಶನಿವಾರ ಚಾಲನೆ ನೀಡಲಾಯಿತು.

ದರಕ ಪರಿವಾರ ವತಿಯಿಂದ ಮಹೇಶ್ವರಿ ಸಮಾಜದ ಸಹಯೋಗದೊಂದಿಗೆ ಆರಂಭವಾಗಿರುವ ಈ ಭಾಗವತ ಪುರಾಣವನ್ನು ಸಮಾಜದ ಬಾಂಧವರು ಆಲಿಸಿ ಪುನೀತರಾಗಬೇಕು ಎಂದು ಹಿರಿಯರಾದ ವೇಣುಗೋಪಾಲ ದರಕ ಹೇಳಿದರು.

ಪುರಾಣವನ್ನು ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹೇಳುತ್ತಿದ್ದು, ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದವರು ಮನವಿ ಮಾಡಿದರು.
ಭಾಗವತ ಆರಂಭಕ್ಕೂ ಮೊದಲು ಭಗವದ್ಗೀತೆಯ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ನಡೆಯಿತು.

ಘನಶ್ಯಾಮ ದರಕ, ಬಾಲಕೃಷ್ಣ ದರಕ, ರಂಗಲಾಲ ದರಕ, ಕಮಲಕಿಶೋರ ದರಕ, ರಾಜಗೋಪಾಲ್ ದರಕ, ರಾಮಾನುಜ ದರಕ, ಪುರುಷೋತ್ತಮ ದರಕ ರಮೇಶ ದರಕ, ಶ್ಯಾಮಸುಂದರ ಡಾಗಾ, ಶ್ಯಾಮಸುಂದರ ಕರವಾ, ಪರಮಾನಂದ ಕರವಾ, ಗೋವಿಂದ ಕರವಾ, ಗೋಪಾಲ ಲಾಹೋಟಿ, ರಾಮ ಅವತಾರಡಾಲಿಯಾ ಹಾಗೂ ಮಹಿಳೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net