

ಮಡಿಕೇರಿ:
ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಈಚೆಗೆ ನಡೆದ 14 ವರ್ಷದೊಳಗಿನವರ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಹೆಚ್.ಆರ್. ಲಿರನ್ ಬೋಪಣ್ಣ ಚಿನ್ನದ ಪದಕ ಪಡೆದುಕೊಳ್ಳುವ ಮೂಲಕ ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರಿಗೆ ಕೊಡಗು ಬಾಕ್ಸಿಂಗ್ ಅಕಾಡೆಮಿಯ ಮುಖ್ಯಸ್ಥ ಕರ್ನಲ್ ಚೆಪುö್ಪಡೀರ ಮುತ್ತಣ್ಣ ಅವರ ಮಾರ್ಗದರ್ಶನದಲ್ಲಿ ತರಬೇತುದಾರರಾದ ದೇಯಂಡ ಮೇದಪ್ಪ ಹಾಗೂ ಶರತ್ ನಾಯ್ಡು ತರಬೇತಿ ನೀಡುತ್ತಿದ್ದಾರೆ.
ಗೋಣಿಕೊಪ್ಪಲು ಜಿ.ಹೆಚ್.ಎಸ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಲಿರನ್, ಜೋಡುಬೀಟಿ ನಿವಾಸಿ ಹೆಚ್.ಕೆ. ರವಿ ಮತ್ತು ಹೆಚ್.ಎಸ್ ವನಿತಾ ದಂಪತಿ ಪುತ್ರ.