ಹಾರ್ಪಿಕ್​ನೊಂದಿಗೆ ಸಾಗಿಸುತ್ತಿದ್ದ 90, 300 ರೂ. ಮೌಲ್ಯದ ಮದ್ಯ ವಶ

Crime
Published on


ಕಾರವಾರ: ಲಾರಿಯಲ್ಲಿ ಹಾರ್ಪಿಕ್ ಬಾಕ್ಸ್​ಗಳ ಜತೆ ಅಕ್ರಮವಾಗಿ ಸಾಗಿಸುತ್ತಿದ್ದ 90, 300 ರೂ. ಮೌಲ್ಯದ ಸ್ಪಿರಿಟ್ ಅನ್ನು ಅಬಕಾರಿ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಗೋವಾದಿಂದ ತಮಿಳುನಾಡಿಗೆ ಈಚರ್ ವಾಹನದಲ್ಲಿ ಸಾಗಿಸುತ್ತಿದ್ದ 35 ಲೀಟರ್​ನ 43 ಕ್ಯಾನ್​ಗಳಲ್ಲಿದ್ದ 1505 ಲೀ. ಸ್ಪಿರಿಟ್, 8.85 ಲಕ್ಷ ರೂ. ಮೌಲ್ಯದ ಹಾರ್ಪಿಕ್ ಹಾಗೂ 12 ಲಕ್ಷ ರೂ. ಮೌಲ್ಯದ ವಾಹನ ಸೇರಿ 21.75. ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ತಮಿಳುನಾಡಿನ ಶ್ರೀನಾಥ ಪೆರಿಯ್ನ್, ಸೆಂಥಲ್ ಕುಮಾರ್ ಅರುಮುಗಮ್ ಅವರನ್ನು ಬಂಧಿಸಲಾಗಿದೆ. ಅಬಕಾರಿ ಸಬ್ ಇನ್​ಸ್ಪೆಕ್ಟರ್​ಗಳಾದ ಎಂ.ಎಂ. ನಾಯ್ಕ, ಎನ್.ಜಿ. ಜೋಗಳೇಕರ್, ಸುರೇಶ ಹಾರೊಗೊಪ್ಪ, ರಂಜನಾ ನಾಯ್ಕ, ವೀರೇಶ ಕುರಿಯವರ, ಎನ್.ಎನ್. ಖಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net