ಎಂಎಸ್‌ಐಎಲ್ ಮಳಿಗೆಯಲ್ಲಿ ಮದ್ಯ ಕಳವು

msil shop
ಎಂಎಸ್‌ಐಎಲ್ ಮಳಿಗೆ
Published on

ಶಿವಮೊಗ್ಗ: ಭದ್ರಾವತಿ ತಾಲೂಕಿನ ಅಂತರಗಂಗೆ ರಸ್ತೆಯಲ್ಲಿರುವ ಯರೇಹಳ್ಳಿ ಭೋವಿ ಕಾಲನಿಯ ಎಂಎಸ್‌ಐಎಲ್ ಮಳಿಗೆ ಶೆಟರ್ ಮುರಿದು ಸಾವಿರಾರು ರೂ. ಮೌಲ್ಯದ ಮದ್ಯ ಕಳವು ಮಾಡಲಾಗಿದೆ.

ಅಂಗಡಿಯ ಒಳಗೆ ವ್ಯಾಪಾರದ ಹಣ 44,860 ರೂ. ಮತ್ತು 630 ರೂ. ಮೌಲ್ಯದ ಆರು ಟಿನ್ ಬಿಯರ್ ಕಳ್ಳತನ ಮಾಡಲಾಗಿದೆ. ಮದ್ಯದಂಗಡಿ ಬಾಗಿಲನ್ನು ಆಯುಧದಿಂದ ಮೀಟಿದ್ದು ಮರುದಿನ ಬೆಳಗ್ಗೆ ಗ್ರಾಮಸ್ಥರು ಮದ್ಯದ ಅಂಗಡಿ ಬಾಗಿಲು ತೆರೆದಿರುವುದನ್ನು ಕಂಡು ಮಾಲೀಕರಿಗೆ ಕರೆ ಮಾಡಿದ್ದರು. ಆಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net