ಮದ್ಯದಂಗಡಿ ಮುಚ್ಚದಿದ್ದರೆ ಗ್ರಾಪಂ ಚುನಾವಣೆ ಮತದಾನ ಬಹಿಷ್ಕಾರ; ತಹಸೀಲ್ದಾರ್‌ಗೆ ಇಟಿಗಿಹಾಳ್ ಮುಖಂಡರ ಎಚ್ಚರಿಕೆ

101220 Itigihal Villagers Appeal to Shift Liquor Shop
ಸಿರಗುಪ್ಪ ತಾಲೂಕಿನ ಇಟಿಗಿಹಾಳ್ ಗ್ರಾಮದ ಮದ್ಯದಂಗಡಿ ತೆರವುಗೊಳಿಸುವಂತೆ ಒತ್ತಾಯಿಸಿ ಮುಖಂಡರು ತಹಸೀಲ್ದಾರ್ ರಾಹುಲ್‌ಸಂಕನೂರುಗೆ ಗುರುವಾರ ಮನವಿ ಸಲ್ಲಿಸಿದರು.
Published on

ಸಿರಗುಪ್ಪ: ತಾಲೂಕಿನ ಇಟಿಗಿಹಾಳ್ ಗ್ರಾಮದಲ್ಲಿರುವ ಮದ್ಯದಂಗಡಿ ತೆರವುಗೊಳಿಸಿ, ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಚುನಾವಣೆ ಭಹಿಷ್ಕರಿಸುವುದಾಗಿ ಗ್ರಾಮದ ಮುಖಂಡರು ತಹಸೀಲ್ದಾರ್ ರಾಹುಲ್‌ಸಂಕನೂರುಗೆ ಗುರುವಾರ ಮನವಿ ಸಲ್ಲಿಸಿದರು.

ಮುಖಂಡ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಇಟಿಗಿಹಾಳ್ ಗ್ರಾಮದಲ್ಲಿ ಮದ್ಯದಂಗಡಿ ನಡೆಸಲು ಸರ್ಕಾರವು ಪರವಾನಗಿ ಕೊಟ್ಟಿರುವುದರಿಂದ ಸಾರ್ವಜನಿಕರು ಮತ್ತು ಗ್ರಾಮದ ಮಹಿಳೆಯರಿಗೆ ತೀವ್ರ ತೊಂದರೆಯಾಗಿದೆ. ಈ ಕುರಿತು ಜಿಲ್ಲಾಧಿಕಾರಿ, ಅಬಕಾರಿ ಜಿಲ್ಲಾ ಅಧಿಕಾರಿ, ತಹಸೀಲ್ದಾರ್‌ಗೆ ಮದ್ಯದ ಅಂಗಡಿ ತೆರವುಗೊಳಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಅಲ್ಲದೆ ಈ ಹಿಂದೆ ಎರಡು ಬಾರಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದಾಗ ಮದ್ಯದಂಗಡಿ ತೆರವುಗೊಳಿಸುತ್ತೆವೆ ಎಂದು ಅಧಿಕಾರಿಗಳು ಸುಳ್ಳು ಭರವಸೆ ನೀಡಿ ಕೆಲದಿನಗಳ ಕಾಲ ಬಂದ್ ಮಾಡಿ ಈಗ ಮತ್ತೆ ಮದ್ಯದಂಗಡಿ ತೆರೆಯುವಂತೆ ಸರ್ಕಾರ ಆದೇಶ ನೀಡಿದೆ.

ಇದರಿಂದಾಗಿ ಗ್ರಾಮಸ್ಥರು ಒಂದು ತೀರ್ಮಾನಕ್ಕೆ ಬಂದಿದ್ದು, ಮದ್ಯದಂಗಡಿ ತೆರವುಗೊಳಿಸದೇ ಹೋದರೆ ಗ್ರಾ ಪಂ ಚುನಾವಣೆ ಮತದಾನ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಗ್ರಾಮಸ್ಥರಾದ ಉಮಾಕಾಂತರೆಡ್ಡಿ, ಹುಸೇನಪ್ಪ, ಸುಭಾನ್‌ಸಾಬ್, ಹುಸೇನ್‌ಸಾಬ್, ರಾಮಚಂದ್ರರೆಡ್ಡಿ, ಎಚ್.ರಾಮಪ್ಪ, ಈರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net