ಗಾಂಧಿ ಜಯಂತಿ ದಿನವೇ ಮದ್ಯ ಮಾರಾಟ, ವ್ಯಕ್ತಿ ಬಂಧನ

Liquor seller arrested
ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿದರು.
Published on

ಶಿವಮೊಗ್ಗ: ಗಾಂಧಿ ಜಯಂತಿ ನಿಮಿತ್ತ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧವಿದ್ದರೂ ಅಕ್ರಮವಾಗಿ ಹೋಟೆಲ್ ಮತ್ತು ಮನೆಯಲ್ಲಿಯೇ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸೋಮವಾರ ಬಂಧಿಸಿರುವ ಅಬಕಾರಿ ಪೊಲೀಸರು, 14.220 ಲೀ. ಮದ್ಯ ಮತ್ತು 10.570 ಲೀ. ಬಿಯರ್ ಅನ್ನು ಜಪ್ತಿ ಮಾಡಿದ್ದಾರೆ.

ಎನ್.ಟಿ.ರಸ್ತೆಯ ಹರಕೆರೆಯ ನಾಗೇಶಪ್ಪ ಬಂಧಿತ ಆರೋಪಿ. ಗಾಂಧಿ ಜಯಂತಿ ಅಂಗವಾಗಿ ಶುಷ್ಕ ದಿನದ ಹಿನ್ನಲೆಯಲ್ಲಿ ಹಾಗೂ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಆದರೂ ನಾಗೇಶಪ್ಪ ಅವರು ಮನೆಯಲ್ಲೇ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತೆ ಕೆ.ಕೆ.ಸುಮಿತ್ರಾ ಅವರ ನಿರ್ದೇಶನದಲ್ಲಿ ಉಪ ಅಧೀಕ್ಷಕ ನೌಶಾದ್ ಖಾನ್ ಅವರ ಮಾರ್ಗದರ್ಶನದಲ್ಲಿ ನಿರೀಕ್ಷಕ ಎಂ.ಭೂಪತಿ, ಉಪ ನಿರೀಕ್ಷಕಿ ಸಾವಿತ್ರಮ್ಮ ಅವರು ಹರಕೆರೆಯ ಹೋಟೆಲ್ ಮತ್ತು ಮನೆಯಲ್ಲಿ ಮದ್ಯ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net